ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮೇಯರ್ ಚುನಾವಣೆಯಲ್ಲಿ ಅಡ್ಡಮತದಾನದ ಸುಳಿವು

ಆಪರೇಷನ್ ಕಮಲದ ಸೂಚನೆ ನೀಡಿದ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್
Last Updated 7 ಡಿಸೆಂಬರ್ 2022, 21:01 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಸದಸ್ಯರ ಪೈಕಿ ಯಾರು ಮೇಯರ್ ಆಗುತ್ತಾರೆ ಎಂಬ ಕುತೂಹಲ ಮೂಡಿಸಿರುವ ಮಧ್ಯೆಯೇ, ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಮಾಡಿರುವ ಟ್ವೀಟ್ ಆಪರೇಷನ್ ಕಮಲದ ಸೂಚನೆ ನೀಡಿದೆ.

ಮೇಯರ್ ಹುದ್ದೆಯನ್ನು ಮಹಿಳೆಗೆ ನೀಡುವುದಾಗಿ ಎಎಪಿ ಈ ಹಿಂದೆ ಪ್ರಕಟಿಸಿತ್ತು.

ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಡ್ಡಮತದಾನ ನಡೆಯುವ ಸಾಧ್ಯತೆಯಿದೆ ಎಂಬ ಸುಳಿವನ್ನು ಮಾಳವೀಯ ನೀಡಿದ್ದಾರೆ. ಹೀಗಾಗಿ ಮೇಯರ್ ಚುನಾವಣೆಯು ತೀವ್ರ ತುರುಸಿನಿಂದ ಕೂಡಿದ್ದು, ಏನು ಬೇಕಾದರೂ ಆಗಬಹುದು ಎಂದು ವಿಶ್ಲೇಷಿಸಲಾಗಿದೆ.

ಚಂಡೀಗಢ ಪಾಲಿಕೆಯ ಉದಾಹರಣೆಯನ್ನು ಮಾಳವೀಯ ನೀಡಿದ್ದಾರೆ. ಚಂಡೀಗಢ ಪಾಲಿಕೆಯ 35 ಕ್ಷೇತ್ರಗಳ ಪೈಕಿ 14 ಕಡೆ ಗೆದ್ದಿದ್ದ ಎಎಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತ ಸಿಕ್ಕಿರಲಿಲ್ಲ. ಆದರೆ ಅಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್ ಆಗಿ ಆಯ್ಕೆಯಾಗಿದ್ದರು.

ತಮ್ಮ ಪಕ್ಷದವರೇ ಮತ್ತೆ ಮೇಯರ್ ಆಗಲಿದ್ದಾರೆ ಎಂದು ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗ ಇರುವ ಸಂಖ್ಯಾಬಲದಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿಮಾಳವೀಯ ಅವರ ಹೇಳಿಕೆಯು ಅಡ್ಡಮತ
ದಾನದ ಜೊತೆಗೆ ಆಪರೇಷನ್ ಕಮಲದ ಸುಳಿವನ್ನು ನೀಡುತ್ತದೆ.

ದೆಹಲಿಯಲ್ಲಿ ಎಎಪಿ 134, ಬಿಜೆಪಿ 104 ಹಾಗೂ ಕಾಂಗ್ರೆಸ್ 9 ವಾರ್ಡ್‌ಗಳಲ್ಲಿ ಗೆದ್ದಿದ್ದು, ಎಎಪಿ ಸರಳ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಮೇಯರ್ ಚುನಾವಣೆಯಲ್ಲಿ 250 ವಾರ್ಡ್‌ಗಳ ಸದಸ್ಯರು, 10 ಮಂದಿ ಸಂಸದರು ಹಾಗೂ ದೆಹಲಿ ವಿಧಾನಸಭೆಯ 70 ಶಾಸಕರ ಪೈಕಿ 14 ಶಾಸಕರು ಭಾಗವಹಿಸಬಹುದು. ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶವಿಲ್ಲ. 14 ಶಾಸಕರನ್ನು ಪ್ರತೀ ವರ್ಷ ಸರದಿಯಂತೆ ಆಯ್ಕೆ ಮಾಡಲಾಗುತ್ತದೆ.

ಸಂಸದರು ಹಾಗೂ ಶಾಸಕರು ಸೇರಿ ಒಟ್ಟು 24 ಜನಪ್ರತಿನಿಧಿಗಳ ಪೈಕಿ 9–10 ಮತಗಳುಬಿಜೆಪಿಗೆ ಸಿಗಬಹುದು. ಆಗ ಬಿಜೆಪಿ ಬಲ 114 ಆಗುತ್ತದೆ. ಎಎಪಿ ಬಲ 148 ಆಗುತ್ತದೆ. ಎರಡೂ ಪಕ್ಷಗಳ ನಡುವೆ 34 ಮತಗಳ ಅಂತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT