ಭಾನುವಾರ, ಸೆಪ್ಟೆಂಬರ್ 19, 2021
31 °C

ತಮಿಳುನಾಡು: ‘ನೀಟ್‘ ಪರೀಕ್ಷೆಗೆ ಮೊದಲೇ ಅಭ್ಯರ್ಥಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ

ಸೇಲಂ: ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯಾಗಿದ್ದ 19 ವರ್ಷದ ಯುವಕ ಧನುಷ್‌, ಮೂರನೇ ಬಾರಿಗೆ ‘ನೀಟ್‌’ ಪರೀಕ್ಷೆಗೆ ಹಾಜರಾಗುವ ಮೊದಲೇ ಮೆಟ್ಟೂರು ಸಮೀಪದ ಕೂಜಾಹೈಯುರುವಿನ ತನ್ನ ನಿವಾಸದಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆ ಆರಂಭಕ್ಕೂ ಕೆಲವೇ ಗಂಟೆ ಮೊದಲು ಈ ಪ್ರಕರಣ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮೊದಲು ಗುರುತಿಸಿದ ಯುವಕನ ತಾಯಿ ಈ ಬಗ್ಗೆ ಮಾಹಿತಿ ನೀಡಿದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು. ಕೃತ್ಯಕ್ಕೂ ಮುನ್ನ ಪತ್ರ ಬರೆದಿಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದ ಅವರು, ‘ನೀಟ್‌ ಪರೀಕ್ಷೆಗೆ ಮೂರನೇ ಬಾರಿಗೆ ಹಾಜರಾಗಬೇಕಿತ್ತು. ಕಳೆದೆರಡು ಬಾರಿ ವಿಫಲರಾಗಿದ್ದರು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು