ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಗಂಟೆಯೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಿ: ಮೆಹಬೂಬಾ ಮುಫ್ತಿಗೆ ನೋಟಿಸ್‌

Last Updated 28 ನವೆಂಬರ್ 2022, 5:22 IST
ಅಕ್ಷರ ಗಾತ್ರ

ಶ್ರೀನಗರ (ಜಮ್ಮು ಕಾಶ್ಮೀರ): 24 ಗಂಟೆಯೊಳಗೆ ಸರ್ಕಾರಿ ನಿವಾಸ ಖಾಲಿ ಮಾಡಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಅನಂತ್‌ನಾಗ್‌ ಜಿಲ್ಲಾಧಿಕಾರಿ ನೋಟಿಸ್‌ ನೀಡಿದ್ದಾರೆ.

ಮೆಹಬೂಬಾ ಮುಫ್ತಿ, ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದಾರೆ. ಇದನ್ನು ಖಾಲಿ ಮಾಡಬೇಕು ಎಂದು ಅವರಿಗೆ ಒಂದು ತಿಂಗಳ ಹಿಂದೆ ನೋಟಿಸ್‌ ನೀಡಲಾಗಿತ್ತು. ಆದರೆ ಅವರು ಬಂಗಲೆ ಖಾಲಿ ಮಾಡದ ಕಾರಣ, ಇದೀಗ ಮತ್ತೆ ನೋಟಿಸ್‌ ಜಾರಿ ಮಾಡಿದ್ದು, 24 ಗಂಟೆಗಳ ಗಡುವು ನೀಡಲಾಗಿದೆ.

‘ಖನಬಾಲ್‌ ಹೌಸಿಂಗ್‌ ಕಾಲೊನಿಯ 7 ನೇ ನಂಬರ್ ಮನೆಯನ್ನು ಖಾಲಿ ಮಾಡಿ‘ ಎಂದು ಶನಿವಾರ ಮುಫ್ತಿ ಅವರಿಗೆ ಸೂಚಿಸಲಾಗಿದೆ.

‘24 ಗಂಟೆಯೊಳಗೆ ಬಂಗಲೆ ಖಾಲಿ ಮಾಡಲು ನಿಮಗೆ ನಿರ್ದೇಶಿಸಲಾಗಿದೆ. ಇದು ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು‘ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಬಂಗಲೆ ಖಾಲಿ ಮಾಡಲು ನನಗೆ ನೋಟಿಸ್‌ ನೀಡಲಾ‌ಗಿದೆ ಎಂದು ಮೆಹಬೂಬಾ ನವೆಂಬರ್‌ 20 ರಂದು ಹೇಳಿದ್ದರು.

ಮುಫ್ತಿ ಅವರಿಗೆ ಇನ್ನೊಂದು ಬಂಗಲೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಎಲ್ಲಾ ರಾಜ್ಯಗಳಲ್ಲಿ, ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳಿಗೆ ಸರ್ಕಾರಿ ಬಂಗಲೆಗಳನ್ನು ನೀಡಲಾಗುತ್ತದೆ. ಅಧಿಕಾರವಧಿ ಮುಗಿದ ಬಳಿಕ ಅದನ್ನು ತೆರವುಗೊಳಿಸಬೇಕು. ಆದರೆ ಜಮ್ಮು ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಜೀವನ ಪರ್ಯಂತ ಸರ್ಕಾರಿ ಬಂಗಲೆ ನೀಡುವ ಕಾನೂನು ಇತ್ತು.

2019ರಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಇದು ರದ್ದಾಗಿತ್ತು. ಹೀಗಾಗಿ 2020ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಓಮರ್‌ ಅಬ್ದುಲ್ಲ ಹಾಗೂ ಗುಲಾಂ ನಬಿ ಅಜಾದ್‌ ಸರ್ಕಾರಿ ಬಂಗಲೆ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT