ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಪ್ರಾಧಿಕಾರಕ್ಕೆ ಅಧಿಕಾರ- ಸಾಲಿಸಿಟರ್‌ ಜನರಲ್‌ ಅಭಿಪ್ರಾಯ

Last Updated 26 ಜುಲೈ 2022, 21:11 IST
ಅಕ್ಷರ ಗಾತ್ರ

ನವದೆಹಲಿ: ‘ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಮಾರ್ಪಾಡಾಗಿರುವ ಅಂತಿಮ ತೀರ್ಪಿನ ಪ್ರಕಾರ, ಮೇಕೆದಾಟು ಯೋಜನೆಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಜಲಶಕ್ತಿ ಸಚಿವಾಲಯದ ಸಿಡಬ್ಲ್ಯುಎಂಎಗೆ ಸಲ್ಲಿಸಿದ ಅಭಿಪ್ರಾಯದಲ್ಲಿ ಮೆಹ್ತಾ, ‘ಸಿಡಬ್ಲ್ಯುಎಂಎ ಸಂರಚನೆ ಬಗ್ಗೆ 2018ರ ಜೂನ್‌ 1ರಂದು ಹೊರಡಿಸಲಾದ ಅಧಿಸೂಚನೆಯ ಸೆಕ್ಷನ್‌ 3ರಲ್ಲಿ ಪ್ರತಿಯೊಂದು ಸಂತ್ರಸ್ತ ರಾಜ್ಯದ ಪ್ರತಿನಿಧಿಗಳನ್ನೂ ಅದು ಒಳಗೊಂಡಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅವುಗಳ ಅಧಿಕಾರ ಮತ್ತು ಕಾರ್ಯದ ಬಗ್ಗೆ ಸೆಕ್ಷನ್‌ 10ರ ಅಡಿ ಪಟ್ಟಿ ಮಾಡಲಾಗಿದೆ. ಈ ಅಧಿಕಾರಗಳು ವಿಶಾಲ ವ್ಯಾಪ್ತಿಯನ್ನು ಹೊಂದಿವೆ. ಈ ಕೆಲವು ಕಾರಣಗಳಿಂದಾಗಿಯೇ, ವಿವಾದಗಳನ್ನು ಮೊದಲು ಪರಿಶೀಲನೆಗೆ ಒಳಪಡಿಸಿ ನಂತರ ವರದಿ ನೀಡುವ ಸಲುವಾಗಿ ಸಿಡಬ್ಲ್ಯುಸಿಗೆ ಸಿಡಬ್ಲ್ಯುಎಂಎಯ ಅಗತ್ಯ ಇರುವಂತೆ ತೋರುತ್ತದೆ‘ ಎಂದು ತಿಳಿಸಿದ್ದಾರೆ

ಈ ಕಾರಣಗಳಿಂದಾಗಿ ಪ್ರಾಧಿಕಾರವು ಯೋಜನೆಯ ಬಗ್ಗೆ ಚರ್ಚಿಸಿ ಕೇಂದ್ರ ಜಲ ಆಯೋಗಕ್ಕೆ ವರದಿ ಸಲ್ಲಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಮಂಗಳವಾರದ ವಿಚಾರಣೆ ವೇಳೆ ಪ್ರಾಧಿಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ವಾದ ಮಂಡಿಸಿ, ಈ ವಿಷಯದಲ್ಲಿ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಕೋರಿದರು. ಬಳಿಕ ವಿಚಾರಣೆಯನ್ನು ಆಗಸ್ಟ್‌ 10ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT