ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ₹1,400 ಕೋಟಿ ಮೌಲ್ಯದ ಮಾದಕ ವಸ್ತು ವಶ

ಡ್ರಗ್ಸ್‌ ದಂದೆಯ ಜಾಲ ಭೇದಿಸಿದ ಎಎನ್‌ಸಿ ಪೋಲಿಸರು; ಎಂಎಸ್‌ಸಿ ಪದವೀಧರ ಸೇರಿ ಐವರ ಬಂಧನ
Last Updated 4 ಆಗಸ್ಟ್ 2022, 14:05 IST
ಅಕ್ಷರ ಗಾತ್ರ

ಮುಂಬೈ: ಮಾದಕ ವಸ್ತು ತಯಾರಿಕೆ, ಕಳ್ಳ ಸಾಗಣೆ ಮತ್ತು ಮಾರಾಟದ ಬಹುದೊಡ್ಡ ಜಾಲವೊಂದನ್ನು ಭೇದಿಸಿರುವ ಮುಂಬೈ ಅಪರಾಧ ಪತ್ತೆ ವಿಭಾಗದ ಪೊಲೀಸರುಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ನಲಸೋಪ‍ರದಲ್ಲಿ ಸುಮಾರು ₹1,403 ಕೋಟಿ ಮೌಲ್ಯದ ಸುಮಾರು 701 ಕೆ.ಜಿ ಮೆಫೆಡ್ರೋನ್‌ (ಮಾದಕ ವಸ್ತು) ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಜಾಲದ ಬೆನ್ನುಹತ್ತಿದ್ದಮುಂಬೈ ಅಪರಾಧ ಪತ್ತೆ ವಿಭಾಗದ ಮಾದಕ ವಸ್ತು ನಿಗ್ರಹ ಘಟಕವು (ಎಎನ್‌ಸಿ) ಬುಧವಾರನಲಸೋಪ‍ರದಲ್ಲಿನ ಮಾದಕ ವಸ್ತುತಯಾರಿಕೆ ಘಟಕದ ಮೇಲೆ ದಾಳಿ ನಡೆಸಿದೆ.ರಾಸಾಯನ ವಿಜ್ಞಾನ (ಆರ್ಗ್ಯಾನಿಕ್‌) ಸ್ನಾತಕೋತ್ತರ ಪದವೀಧರ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಎನ್‌ಸಿಯ ಡಿಸಿಪಿ ದತ್ತ ನಲವಾಡೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.

ಬಂಧಿತರ ಪೈಕಿ ಒಬ್ಬ ಮಹಿಳೆಯೂ ಇದ್ದಾಳೆ. ಸ್ನಾತಕೋತ್ತರ ಪದವೀಧರನಾದ 52 ವರ್ಷದ ಆರೋಪಿಯೇ ಈ ದಂದೆಯ ಪ್ರಮುಖ ರೂವಾರಿ.ವಿವಿಧ ರಾಸಾಯನಿಕಗಳನ್ನು ಪ್ರಯೋಗಕ್ಕೆ ಒಳಪಡಿಸಿ, ನಿಷೇಧಿತ ಮತ್ತಿನ ವಸ್ತು ಮೆಫೆಡ್ರೋನ್ ಉತ್ಪಾದಿಸುವ ಸೂತ್ರವನ್ನು ಕಂಡುಹಿಡಿದಿರುವ ಆರೋಪಿ, ‘ಗರಿಷ್ಠ ಗುಣಮಟ್ಟ’ದ ಮಾದಕ ವಸ್ತುಗಳನ್ನು ತಯಾರಿಸುತ್ತಿದ್ದ. 25 ಕೆ.ಜಿ ಗಿಂತ ಕಡಿಮೆ ಪ್ರಮಾಣದಲ್ಲಿ ಯಾರಿಗೂ ಮಾರಾಟ ಮಾಡುತ್ತಿರಲಿಲ್ಲ. ಮಾರಾಟಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಆ್ಯಪ್‌ವೊಂದನ್ನು ರೂಪಿಸಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಂಡ ಅತೀ ದೊಡ್ಡ ಪ್ರಮಾಣದ (ಏಳು ಕ್ವಿಂಟಲ್‌) ಮಾದಕ ವಸ್ತು ಎನಿಸಿದೆ.ಎಂಡಿ ಹೆಸರಿನ ಈ ಮಾದಕ ವಸ್ತುವನ್ನು ಮುಂಬೈ ಮತ್ತು ನೆರೆಹೊರೆಯ ಪ್ರದೇಶಗಳ ಡ್ರಗ್‌ ಪೆಡ್ಲರ್‌ಗಳಿಗೆ ಪೂರೈಸಲಾಗುತ್ತಿತ್ತು.ಮುಂಬೈ ಉಪನಗರ ಗೋವಂಡಿಯಲ್ಲಿ ಡ್ರಗ್‌ ಪೆಡ್ಲರ್‌ ಒಬ್ಬನನ್ನು 250 ಗ್ರಾಂ ಮಾದಕ ವಸ್ತು ಸಮೇತಕಳೆದ ಮಾರ್ಚ್‌ 29ರಂದು ಎಎನ್‌ಸಿಯ ವೊರ್ಲಿ ತಂಡವು ಬಂಧಿಸಿ ವಿಚಾರಣೆ ನಡೆಸಿದಾಗ, ಸಿಕ್ಕಿದ ಮಹತ್ವದ ಸುಳಿವುಗಳಿಂದ ಈ ಜಾಲ ಭೇದಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT