ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಅಪಹರಣ, ಆರೋಪಿಯನ್ನು ಬಂಧಿಸಿದ ಪೊಲೀಸರು

Last Updated 3 ಅಕ್ಟೋಬರ್ 2021, 3:52 IST
ಅಕ್ಷರ ಗಾತ್ರ

ಬದೋಹಿ (ಉತ್ತರ ಪ್ರದೇಶ): ಒಂದು ವರ್ಷದ ಹಿಂದೆ ಯುವಕನೊಬ್ಬನಿಂದ ಅಪಹರಣಗೊಂಡು ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸೂರ್ಯಾವಾ ಪೊಲೀಸ್ ಠಾಣೆ ಉಸ್ತುವಾರಿ ಬ್ರಿಜೇಶ್ ಕುಮಾರ್ ಮೌರ್ಯ ಮಾತನಾಡಿ, ಆರೋಪಿ ಪಂಕಜ್ ಕುಮಾರ್ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿದ್ದು, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಳು' ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 10, 2020 ರಂದು ಅಪ್ರಾಪ್ತೆಗೆ ಆರೋಪಿ ಆಮಿಷವೊಡ್ಡಿ ಅಪಹರಣ ಮಾಡಿದ್ದ. ಬಾಲಕಿಯ ತಂದೆ ಸೆಪ್ಟೆಂಬರ್ 16 ರಂದು ಪ್ರಕರಣ ದಾಖಲಿಸಿದ್ದರು. ಈ ವೇಳೆ ಆರೋಪಿ ಕೂಡ ನಾಪತ್ತೆಯಾಗಿದ್ದ.

ಐಪಿಸಿ ಸೆಕ್ಷನ್ 366 (ಅಪಹರಣ) ಮತ್ತು 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಅಪ್ರಾಪ್ತೆಯು ಮಗುವಿಗೆ ಜನ್ಮ ನೀಡಿದ್ದಾಳೆ. ಐದು ದಿನಗಳ ಹಿಂದೆ ಪಕ್ಕದ ಹಳ್ಳಿಯಲ್ಲಿ ಏಳು ತಿಂಗಳ ಮಗುವಿನೊಂದಿಗೆ ಏಕಾಂಗಿಯಾಗಿ ಕಂಡುಬಂದ ಮಾಹಿತಿಯ ಮೇರೆಗೆ ಪೊಲೀಸರು ಆಕೆಯನ್ನು ಕರೆತಂದಿದ್ದಾರೆ. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯದ ವಿಚಾರಣೆಗಳು ಪೂರ್ಣಗೊಂಡಿವೆ.

ಸಂತ್ರಸ್ತೆಯಿಂದ ಕರೆ ಮಾಡಿಸಿದ ನಂತರ, ಆರೋಪಿ ಸೂರ್ಯವಾ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಆಕೆಯ ಮಗುವಿನೊಂದಿಗೆ ಮಹಿಳಾ ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT