ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆಯಿಂದ ಭ್ರಷ್ಟರಿಗೆ ನೆರವು: ಕಾಂಗ್ರೆಸ್

Last Updated 19 ಆಗಸ್ಟ್ 2022, 6:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ನಿರಂತರ ದುರ್ಬಳಕೆಯಿಂದಾಗಿ ಭ್ರಷ್ಟರಿಗೆ ಪಾರಾಗಲು ನೆರವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳ ನಿರಂತರ ದುರ್ಬಳಕೆಯಿಂದಾಗಿ ಏಜೆನ್ಸಿ ಮೇಲಿನ ನಂಬಿಕೆ ಕುಗ್ಗಿದ್ದು, ಭ್ರಷ್ಟರಿಗೆ ಪಾರಾಗಲು ನೆರವಾಗುತ್ತಿದೆ ಎಂದು ಹೇಳಿದ್ದಾರೆ.

ಏಜೆನ್ಸಿಗಳ ಇಂತಹ ಕ್ರಮದಿಂದಾಗಿ ನ್ಯಾಯಯುತವಾದ ವಿಚಾರಣೆಗಳು ಸಹ ಅನುಮಾನದಡಿಯಲ್ಲಿ ಬರುತ್ತವೆ. ಸಿಬಿಐ ದುರ್ಬಳಕೆಯಿಂದಾಗಿ ಭ್ರಷ್ಟರು ಪಾರಾಗುತ್ತಾರೆ. ಅಲ್ಲದೆ ಪ್ರಾಮಾಣಿಕರು ಬೆಲೆ ತೆರುತ್ತಾರೆ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದ ಸಿಬಿಐ, ಶುಕ್ರವಾರ ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಐಎಎಸ್ ಅಧಿಕಾರಿ ಗೋಪಿ ಕೃಷ್ಣ ಸಹಿತ 21 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT