ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮಕ್ಕಳನ್ನು ಹೆತ್ತರೆ ಒಂದು ಲಕ್ಷ ರೂಪಾಯಿ ಬಹುಮಾನ: ಸಚಿವ

ಮಿಜೋರಾಂ ಕ್ರೀಡಾ ಸಚಿವ ಹೇಳಿಕೆ
Last Updated 22 ಜೂನ್ 2021, 12:32 IST
ಅಕ್ಷರ ಗಾತ್ರ

ಐಜ್ವಾಲ್:‘ಯಾರು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೋ ಅಥವಾ ಹೆರುತ್ತಾರೋ ಅಂತಹ ಕುಟುಂಬದ ಪೋಷಕರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು‘ ಎಂದು ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೋಮಾವಿಯಾ ರಾಯಟ್ಟೆ ಅವರು ಘೋಷಿಸಿದ್ದಾರೆ.

ಇದು ಅವರು ಪ್ರತಿನಿಧಿಸುವ ಐಜ್ವಾಲ್ ಪೂರ್ವ ಮತ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದೆ. ಆದರೆ, ಎಷ್ಟು ಮಕ್ಕಳು ಇದ್ದರೆ ಬಹುಮಾನ ನೀಡುತ್ತಾರೆ ಎಂಬುದನ್ನು ಅವರು ಖಚಿತಪಡಿಸಿಲ್ಲ.

‘ಮಿಜೋರಾಂನಲ್ಲಿ ಜನಸಂಖ್ಯೆ ಕುಸಿಯುತ್ತಿದ್ದು, ಅದರಲ್ಲೂ ಮಿಜೋ ಬುಡಕಟ್ಟು ಜನಾಂಗದ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಇವರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಂಡಿದ್ದೇನೆ. ಹಣ ವೈಯಕ್ತಿಕವಾಗಿ ನೀಡುತ್ತೇನೆ‘ ಎಂದು ರಾಬರ್ಟ್‌ ಹೇಳಿದ್ದಾರೆ.

ಹೆಚ್ಚು ಮಕ್ಕಳಿದ್ದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನದ ಜೊತೆ ಪಾರಿತೋಷಕ ಹಾಗೂ ಪ್ರಮಾಣಪತ್ರವನ್ನು ನೀಡುವುದಾಗಿ ಅವರು ಘೋಷಿಸಿದ್ದಾರೆ.

2021 ರ ಅಂಕಿ–ಅಂಶಗಳ ಪ್ರಕಾರ ಮಿಜೋರಾಂ ಒಟ್ಟಾರೆ ಜನಸಂಖ್ಯೆ 12 ಲಕ್ಷ ಇದ್ದು,21,087 ಚ.ಕಿ.ಮೀ ವಿಸ್ತಿರ್ಣ ಹೊಂದಿದೆ. ಒಂದು ಚ.ಕೀ.ಮೀ ವ್ಯಾಪ್ತಿಯಲ್ಲಿ 52 ಜನ ವಾಸಿಸುತ್ತಿದ್ದಾರೆ.

ಇನ್ನೊಂದೆಡೆ ಮಿಜೋರಾಂ ಪಕ್ಕದ ರಾಜ್ಯವಾದ ಅಸ್ಸಾಂನಲ್ಲಿ ಜನಸಂಖ್ಯೆ ನಿಯಂತ್ರಣಾ ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿ ಹಿಮಾಂತ್ ಬಿಸ್ವಾಸ್ ಶರ್ಮಾ ಮುಂದಾಗಿದ್ದಾರೆ. 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ ಅಂತವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT