ಭಾನುವಾರ, ಸೆಪ್ಟೆಂಬರ್ 20, 2020
22 °C

ವೈದ್ಯರ ರಜೆ; ಹೆರಿಗೆ ಮಾಡಿಸಿದ ಮಿಜೋರಾಂ ಶಾಸಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಐಜ್ವಾಲ್‌: ಉತ್ತರ ಚಂಫೈ ಜಿಲ್ಲೆಯ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಮಿಜೋರಾಂ ಶಾಸಕ ಝಡ್‌.ಆರ್‌. ಥಿಯಾಮ್ಸಂಗ ಅವರು, ಹಳ್ಳಿಯೊಂದರಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ಸೋಮವಾರ ಹೆರಿಗೆ ಮಾಡಿಸಿದ್ದಾರೆ.

ವೃತ್ತಿಯಿಂದ ವೈದ್ಯರಾಗಿರುವ (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ) ಥಿಯಾಮ್ಸಂಗ, ಎನ್‌ಗೂರ್ ಎಂಬ ಹಳ್ಳಿಯಲ್ಲಿ ಲಾಲ್ಮಂಗೈಹಸಂಗಿ (38) ಎಂಬ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

‘ಮಹಿಳೆಗೆ ಚಂಫೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಣ ಎಂದರೆ, ಅಲ್ಲಿನ ವೈದ್ಯಾಧಿಕಾರಿ ಅನಾರೋಗ್ಯದ ಕಾರಣ ರಜೆ ಹಾಕಿದ್ದರು. ಇನ್ನೂ ಐಜ್ವಾಲ್‌ ನಗರಕ್ಕೆ ಕಳುಹಿಸಲು ಸಾಧ್ಯವಿರಲಿಲ್ಲ. ಹೀಗಾಗಿ, ನಾನೇ ಆಕೆಯನ್ನು ಚಂಫೈನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮೂಲಕ ಹೆರಿಗೆ ಮಾಡಿಸಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’ ಎಂದು ಶಾಸಕ ಡಾ. ಥಿಯಾಮ್ಸಂಗ್ ತಿಳಿಸಿದ್ದಾರೆ.

‘ಒಬ್ಬ ವೈದ್ಯನಾಗಿ ಇಂಥವರಿಗೆ ನೆರವಾಗುವುದು ನನ್ನ ಕರ್ತವ್ಯ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುವಾಗಲೆಲ್ಲ ಸ್ಟೆತಸ್ಕೋಪ್ ಜತೆಯಲ್ಲಿ ಇಟ್ಟುಕೊಳ್ಳುವ ಈ ಶಾಸಕರು, ತುರ್ತು ಸಂದರ್ಭಗಳಲ್ಲಿ ಜನರಿಗೆ ಚಿಕಿತ್ಸೆಯನ್ನೂ ನೀಡಿರುವ ಉದಾಹರಣೆಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು