ಕೋಲ್ಕತ್ತದಲ್ಲಿ ಮತ್ತೋರ್ವ ಮಾಡೆಲ್ ಶವ ಪತ್ತೆ

ಕೋಲ್ಕತ್ತ: ಬಂಗಾಳಿ ನಟಿ ಮತ್ತು ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಅವರ ಶವ ಬುಧವಾರ ಫ್ಲ್ಯಾಟ್ನಲ್ಲಿ ಪತ್ತೆಯಾದ ಬೆನ್ನಲ್ಲೇ ಮತ್ತೋರ್ವ ರೂಪದರ್ಶಿಯ ಶವ ಕೋಲ್ಕತ್ತದ ಪಟುಲಿಯ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
ರೂಪದರ್ಶಿಯನ್ನು ಮಂಜುಷಾ ನಿಯೋಗಿ ಎಂದು ಗುರುತಿಸಲಾಗಿದ್ದು, ಬಿದಿಶಾ ಡಿ ಮಜುಂದಾರ್ ಅವರ ಗೆಳತಿಯಾಗಿದ್ದಾರೆ.
ಮಂಜುಷಾ ಶವ ಪತ್ತೆಯಾಗಿರುವ ಕುರಿತು ಅವರ ತಾಯಿ ಹೇಳಿಕೆ ನೀಡಿದ್ದು, ಮಗಳು ಆಕೆಯ ಗೆಳತಿ ಸಾವಿನ ಬಳಿಕ ತೀವ್ರವಾಗಿ ನೊಂದುಕೊಂಡಿದ್ದಳು ಎಂದಿದ್ದಾರೆ.
ಮಂಜುಷಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ತನಿಖೆಯ ಬಳಿಕ ಸಾವಿಗೆ ಸೂಕ್ತ ಕಾರಣ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಗಾಳಿ ನಟಿ ಬಿದಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಬಿದಿಶಾ ಅವರ ಶವ ಫ್ಲ್ಯಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ರೀತಿಯಲ್ಲಿ ಮಂಜುಷಾ ಶವ ಪತ್ತೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.