ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರ್ಕಾರ ಗೇಮ್ ಚೇಂಜರ್: ನಡ್ಡಾ

Last Updated 20 ಜನವರಿ 2023, 10:05 IST
ಅಕ್ಷರ ಗಾತ್ರ

ಘಾಜಿಪುರ( ಉತ್ತರ ಪ್ರದೇಶ): ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ತಂದಿದೆ. ದೇಶದ ಭದ್ರತೆಯ ವಿಚಾರದಲ್ಲಿ ಅನೇಕ ಧೃಡ ನಿರ್ಧಾರಗಳನ್ನು ಕೈಗೊಂಡಿದೆ.

ಉತ್ತರ ಪ್ರದೇಶದ ಘಾಜಿಪುರದಲ್ಲಿ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಕಳೆದ ಎಂಟು ವರ್ಷಗಳಲ್ಲಿ ಗಡಿ ಪರಿಸ್ಥಿತಿಯು ಉತ್ತಮವಾಗಿದೆ ಎಂದು ಹೇಳಿದರು.

’ಪ್ರಧಾನಿ ಅವರು ರಕ್ಷಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ನಿರಂತರವಾಗಿ ಶ್ರಮಿಸಿದ್ದಾರೆ. ಭಾರತೀಯ ಸೇನೆಯನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವೆಂದು ಪರಿಗಣಿಸಲಾಗುತ್ತಿದೆ. ಇದು ನಾವು ಹೆಮ್ಮೆ ಪಡುವ ವಿಷಯ. ಬಾಹ್ಯ ಹಾಗೂ ಆತರಿಂಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಭಾರತೀಯ ಸೈನಿಕರು ಎಂತಹ ಹೋರಾಟಕ್ಕೂ ಸನ್ನದ್ಧರಾಗಿದ್ದಾರೆ, ನಮ್ಮನ್ನು ರಕ್ಷಿಸುತ್ತಿದ್ದಾರೆ’ ಎಂದು ತಿಳಿಸಿದರು.

ಇಂದು ಭಾರತವು ಸೈನ್ಯ ಮತ್ತು ಗಡಿಯ ವಿಚಾರದಲ್ಲಿ ಮೊದಲಿನಂತಿಲ್ಲ. ವಿಶ್ವದ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುತ್ತೀವೆ. ಬದಲಾವಣೆಯತ್ತ ಭಾರತ ಹೆಜ್ಜೆ ಹಾಕುತ್ತಿದೆ ಹಾಗೂ ಗಡಿ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಭಾರತವು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಅಥವಾ ಸಹಿಸುವುದಿಲ್ಲ ಎಂಬುದನ್ನು ಪ್ರಧಾನಿ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಇದರ ಪರಿಣಾಮವಾಗಿ, ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವು ಪ್ರತ್ಯೇಕವಾಗಿರಲು ಕಾರಣವಾಗಿದೆ.

ಮೊದಲು ನಾವು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು ಆದರೆ ಈಗ ನಾವು ದೇಶದಲ್ಲಿ ಉತ್ಪಾದನೆಯಾಗುತ್ತಿರುವ 300ಕ್ಕೂ ಅಧಿಕ ರಕ್ಷಣಾ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ. ಆಮದು ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗಿದೆ. ಕಳೆದ ವರ್ಷದವರೆಗೂ ನೌಕಾಪಡೆಯ ಧ್ವಜವು ಸೇಂಟ್ ಜಾರ್ಜ್ ಶಿಲುಬೆಯನ್ನು ಹೊಂದಿತ್ತು, ಆದರೆ ಈಗ ಛತ್ರಪತಿ ಶಿವಾಜಿಯ ಮುದ್ರೆಯನ್ನು ಹೊಂದಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದು ಕೇವಲ ರಕ್ಷಣಾ ಕಾರಿಡಾರ್ ಆಗಿರುವುದಿಲ್ಲ ಬದಲಿಗೆ ಶಕ್ತಿಕೇಂದ್ರವಾಗಲಿದೆ ಎಂದು ನಡ್ಡಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT