ಸೋಮವಾರ, ಅಕ್ಟೋಬರ್ 26, 2020
27 °C

ದೇವರನ್ನು, ಜನರನ್ನು ದೂರುವ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಿಲ್ಲ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ತನ್ನ ದುರಾಡಳಿತದ ಬಗ್ಗೆ ಕುರುಡುತನ ಪ್ರದರ್ಶಿಸುತ್ತಿರುವ ಮೋದಿ ಸರ್ಕಾರವು ಕೆಲವೊಮ್ಮೆ ದೇವರನ್ನು, ಕೆಲವೊಮ್ಮೆ ಜನರನ್ನು ದೂಷಿಸುತ್ತದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಜನರ ಬೇಜವಾಬ್ದಾರಿಯಿಂದಾಗಿ ಕೋವಿಡ್-19 ಹರಡುತ್ತಿದೆ' ಎಂಬ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ.

ಕೊರೊನಾವೈರಸ್‌ ಪಿಡುಗಿನ ಬಗ್ಗೆ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಹರ್ಷವರ್ಧನ್, 'ಸಾಮಾಜಿಕ ಬೇಜಾಬ್ದಾರಿಯಿಂದಾಗಿ ದೇಶದಲ್ಲಿ ಕೋವಿಡ್-19 ಹರಡುತ್ತಿದೆ' ಎಂದು ಹೇಳಿದ್ದರು.

'ಹರ್ಷವರ್ಧನ್ ಅವರ ಹೇಳಿಕೆಯ ವರದಿಯನ್ನೂ ರಾಹುಲ್ ಟ್ವೀಟ್ ಮಾಡಿದ್ದಾರೆ. 'ಮೋದಿಯ ಆಟವನ್ನು ದೇಶದ ಇನ್ನೆಷ್ಟು ಜನರು ಭರಿಸಲು ಸಾಧ್ಯ?' (Act Of Modi) ಎಂದು ಪ್ರಶ್ನಿಸಿದ್ದಾರೆ.

ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಹುಲ್‌ಗಾಂಧಿ ಆಗ್ಗಾಗ್ಗೆ ಟೀಕಿಸುತ್ತಿದ್ದಾರೆ. ಸರ್ಕಾರ ರಾಹುಲ್‌ರ ಟೀಕೆಗಳನ್ನು ನಿರಾಕರಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು