ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಅನುಭವ: ಜನರಿಂದ ಅಭಿಪ್ರಾಯ ಕೇಳಿದ ಪ್ರಧಾನಿ ಮೋದಿ

ಡಿಸೆಂಬರ್ 27ರ ಮನ್‌ ಕಿ ಬಾತ್‌ಗೆ ಮುನ್ನ ಅಭಿಪ್ರಾಯ ಕಳುಹಿಸಲು ಮನವಿ
Last Updated 18 ಡಿಸೆಂಬರ್ 2020, 7:20 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ 19‘ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟದಲ್ಲೇ ಕಳೆದಿರುವ ಈ ವರ್ಷದ ಅನುಭವ ಮತ್ತು ಮುಂದಿನ ವರ್ಷ ಏನನ್ನು ನಿರೀಕ್ಷಿಸುತ್ತೀರಿ ಎಂಬುದರ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಮ್ಮ ಬಾನುಲಿ ಕಾರ್ಯಕ್ರಮ ‘ಮನ್‌ ಕಿ ಬಾತ್‌‘ ಈ ತಿಂಗಳ 27ರಂದು ಪ್ರಸಾರವಾಗಲಿದೆ. ಇದು ವರ್ಷದ ಕೊನೆಯ ಕಂತು. ಈ ಕಾರ್ಯಕ್ರಮ ಪ್ರಸಾರವಾಗುವುದರೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ‘ಮೈಗವ್‌ ನಮೊ ಆ್ಯಪ್‌‘ (MyGov, NaMo App)ಗೆ ಕಳುಹಿಸಬಹುದು. 1800–11–7800 ಕರೆ ಮಾಡಿ, ಧ್ವನಿ ಮೂಲಕವೂ ಅಭಿಪ್ರಾಯಗಳನ್ನು ದಾಖಲಿಸಬಹುದು ಎಂದು ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT