ಗುರುವಾರ , ಅಕ್ಟೋಬರ್ 21, 2021
21 °C

ಅನಿಲ್‌ ದೇಶಮುಖ್‌ ಹಣ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ: ವಿಶೇಷ ನ್ಯಾಯಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಮಾಜಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವಂತೆ ಹಣ ಹಸ್ತಾಂತರಗೊಂಡಿರುವ ಜಾಡನ್ನು ಗಮನಿಸಿದಾಗ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ವಾಜೆ ಹಾಗೂ ಅವರ ಆಪ್ತ ಕುಂದನ್‌ ಶಿಂಧೆ ಅವರಿಂದ ₹ 4.7 ಕೋಟಿ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ದೇಶಮುಖ್‌ ಅವರ ವಿರುದ್ಧ ಸೆ.16ರಂದು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿನ ಅಂಶಗಳನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಶನಿವಾರ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ ಹೇಳಿಕೆಗಳು ಹಾಗೂ ಹಣದ ಹರಿವಿನ ಜಾಡನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ದೇಶಮುಖ್‌ ಅವರು ₹ 4.7 ಕೋಟಿ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ’.

ಪುತ್ರ ಹೃಷಿಕೇಶ್‌ ದೇಶಮುಖ್‌ ಸೂಚನೆ ಮೇರೆಗೆ ಅನಿಲ್‌ ದೇಶಮುಖ್‌ ಅವರು ಈ ಹಣವನ್ನು ‘ಹವಾಲಾ’ ಮಾರ್ಗದ ಮೂಲಕ ಸುರೇಂದ್ರ ಜೈನ್‌ ಹಾಗೂ ವೀರೇಂದ್ರ ಜೈನ್‌ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂತರ, ಕೇವಲ ದಾಖಲೆಗಳಲ್ಲಿ ಮಾತ್ರ ಇರುವ ಕಂಪನಿಗಳ ಮೂಲಕ ಈ ಹಣವನ್ನು ದೇಶಮುಖ್‌ ಒಡೆತನದ ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಖಾತೆಗಳಲ್ಲಿ ಜಮೆ ಮಾಡಲಾಗಿದೆ’ ಎಂದೂ ಕೋರ್ಟ್‌ ಹೇಳಿದೆ.

‘ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ಮೇಲ್ನೋಟಕ್ಕೆ ಸಾಕಷ್ಟು ಆಧಾರಗಳಿವೆ’ ಎಂದೂ ಕೋರ್ಟ್‌ ಹೇಳಿದೆ. ಹೃಷಿಕೇಶ್‌, ಸುರೇಂದ್ರ ಜೈನ್‌ ಹಾಗೂ ವೀರೇಂದ್ರ ಜೈನ್‌ ಸಹ ಈ ಪ್ರಕರಣದ ಆರೋಪಿಗಳಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು