ಮಂಗಳವಾರ, ಮಾರ್ಚ್ 21, 2023
20 °C

8ರಿಂದ ಮುಂಗಾರು ಚುರುಕು ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೆಲ ದಿನಗಳಿಂದ ಕ್ಷೀಣಿಸಿದ್ದ ನೈರುತ್ಯ ಮುಂಗಾರು ಇದೇ 8ರಿಂದ ಚುರುಕಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್‌ ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ವಾತಾವರಣವನ್ನು ಗಮನಿಸಿದರೆ ಕೆಲ ದಿನಗಳಲ್ಲಿ ಮುಂಗಾರು ಚುರುಕಾಗುವ ಲಕ್ಷಣಗಳು ಗೋಚರಿಸಿವೆ. ದೇಶದ ದಕ್ಷಿಣ, ಪಶ್ಚಿಮ ಕರಾವಳಿ, ಪೂರ್ವ ಮಧ್ಯ ಭಾಗದಲ್ಲಿ ಇದೇ 8ರಿಂದ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಜೂನ್ ತಿಂಗಳ ಮೊದಲ ಎರಡೂವರೆ ವಾರಗಳವರೆಗೆ ಉತ್ತಮ ಮಳೆ ಸುರಿಸಿದ್ದ ಮುಂಗಾರು ಬಳಿಕ ಕ್ಷೀಣಿಸಿತ್ತು. ದೆಹಲಿ, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮದ ಭಾಗಗಳು, ಪಂಜಾಬ್, ರಾಜಸ್ಥಾನದ ಪಶ್ಚಿಮ ಭಾಗಗಳಿಗೆ ಇನ್ನೂ ಮುಂಗಾರು ಪ್ರವೇಶವೇ ಆಗಿಲ್ಲ. ದೆಹಲಿ ಸೇರಿದಂತೆ ಇತರ ಭಾಗಗಳಿಗೆ ಇದೇ 11ರ ವೇಳೆಗೆ ಮುಂಗಾರು ಪ್ರವೇಶಿಸಬಹುದು ಎಂದು ಅವರು ತಿಳಿಸಿದ್ದಾರೆ.

ದೇಶದ ಬಹುತೇಕ ಭಾಗಗಳಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು