ಗುರುವಾರ , ಮಾರ್ಚ್ 23, 2023
30 °C

ಮೊರ್ಬಿ ಸೇತುವೆ ಕುಸಿತ: ಒರೆವಾ ಸಮೂಹದ ಜಯ್‌ಸುಖ್‌ ಪಟೇಲ್‌ ವಿರುದ್ಧ ಬಂಧನ ವಾರಂಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೊರ್ಬಿ: 135 ಜನರನ್ನು ಬಲಿ ಪಡೆದ ಮೊರ್ಬಿ ತೂಗುಸೇತುವೆ ಕುಸಿತ ಪ್ರಕರಣ ಸಂಬಂಧ ಒರೆವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಯ್‌ಸುಖ್‌ ಪಟೇಲ್‌ ವಿರುದ್ಧ ಗುಜರಾತ್‌ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ.

‘ಮೊರ್ಬಿಯ ಚೀಫ್‌ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಎಂ.ಜೆ ಖಾನ್ ಅವರು ಸಿಆರ್‌ಪಿಸಿ ಸೆಕ್ಷನ್‌ 70 ಅಡಿಯಲ್ಲಿ ಬಂಧನ ವಾರಂಟ್‌ ಹೊರಡಿಸಿದ್ದಾರೆ’ ಎಂದು ಸಂತ್ರಸ್ತರ ಪರ ವಕೀಲ ದಿಲೀಪ್‌ ಅಗೆಚಾನಿಯಾ ತಿಳಿಸಿದ್ದಾರೆ.

ಈ ಮಧ್ಯೆ ನಿರೀಕ್ಷಣಾ ಜಾಮೀನು ಕೋರಿ ಪಟೇಲ್‌ ಜ.20ರಂದೇ ಮೊರ್ಬಿ ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆಯನ್ನು ಫೆ.1ಕ್ಕೆ ಮುಂದೂಡಲಾಗಿದೆ.

ಗಡಿಯಾರ ತಯಾರಿಕೆಯ  ಕಂಪನಿ ಅಜಂತಾಗೆ (ಒರೆವಾ ಸಮೂಹ) ಸೇತುವೆ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. ಸೇತುವೆಯ ಕುಸಿತಕ್ಕೆ ಒರಿವಾ ಸಮೂಹದ ಕಡೆಯಿಂದಾದ ಲೋಪಗಳನ್ನೂ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವು ವರದಿಯಲ್ಲಿ ಉಲ್ಲೇಖಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು