ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕಾಶ್ಮೀರದಿಂದ ಅಮರನಾಥ ಯಾತ್ರೆಗೆ ಹೊರಟ 5,284 ಯಾತ್ರಿಗಳು

Last Updated 17 ಜುಲೈ 2022, 16:47 IST
ಅಕ್ಷರ ಗಾತ್ರ

ಜಮ್ಮು:ದಕ್ಷಿಣ ಕಾಶ್ಮೀರದಿಂದ 5,200 ಯಾತ್ರಿಗಳ 18ನೇ ತಂಡ ಅಮರನಾಥ ಯಾತ್ರೆಗಾಗಿ ಭಾನುವಾರ ಇಲ್ಲಿಂದ ಹೊರಟಿತು.

ಸಿಆರ್‌ಪಿಎಫ್‌ ಸಿಬ್ಬಂದಿಯ ಭದ್ರತೆಯೊಂದಿಗೆಭಾಗವತಿ ನಗರ್‌ ಯಾತ್ರಿ ನಿವಾಸದಿಂದ225 ವಾಹನದೊಂದಿಗೆ ಒಟ್ಟು5,284 ಯಾತ್ರಿಗಳು ಹೊರಟರು ಎಂದು ಅಧಿಕಾರಿಗಳು ತಿಳಿಸಿದರು.

1,743 ಯಾತ್ರಿಗಳ ಮೊದಲ ಗುಂಪು ಬಾಲಟಾಲ್‌ ಬೇಸ್‌ ಶಿಬಿರದ ಕಡೆಗೆ ಬೆಳಿಗ್ಗೆ 3.20ರ ಸುಮಾರಿಗೆ ಪ್ರಯಾಣ ಬೆಳೆಸಿದೆ. ಈ ಗುಂಪಿನೊಂದಿಗೆ 87 ವಾಹನಗಳಿವೆ.3,541 ಯಾತ್ರಿಗಳಿರುವ ಎರಡನೇ ತಂಡ 138 ವಾಹನಗಳೊಂದಿಗೆ ಬೆಳಿಗ್ಗೆ 4.20ಕ್ಕೆ ಹೊರಟಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT