ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆಯಬೇಡ ಎಂದು ಹೇಳಿದ್ದರು ನನ್ನ ತಾಯಿ: ಪ್ರಧಾನಿ ಮೋದಿ

Last Updated 18 ಜೂನ್ 2022, 11:02 IST
ಅಕ್ಷರ ಗಾತ್ರ

ನವದೆಹಲಿ: ಬಡವರ ಕಲ್ಯಾಣ (ಗರೀಬ್‌ ಕಲ್ಯಾಣ್‌) ಕುರಿತಂತೆ ತಮ್ಮ ಸರ್ಕಾರದ ಜಾರಿಗೆ ತಂದಿರುವ ಹಲವಾರು ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಬಲವಾದ ಸಂಕಲ್ಪ ಮತ್ತು ಗಮನವನ್ನು ನೀಡಲು ತಮ್ಮ ತಾಯಿಯೇ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ ಅವರ ತಾಯಿ ಶನಿವಾರ 100ನೇ ವರ್ಷಕ್ಕೆ ಕಾಲಿರಿಸಿದರು. ಈ ಹಿನ್ನೆಲೆಯಲ್ಲಿ ಬ್ಲಾಗ್‌ ಮೂಲಕ ತಮ್ಮ ತಾಯಿಯ ತ್ಯಾಗ, ವ್ಯಕ್ತಿತ್ವ, ವಿವಿಧ ದೃಷ್ಟಿಕೋನದ ಬಗ್ಗೆ ತಿಳಿಸಿದ್ದು, ಇವೆಲ್ಲವೂ ಹೇಗೆ ತಮ್ಮ ಜೀವನವನ್ನು ರೂಪಿಸಿದವು ಎಂದು ಎಂದು ಹೇಳಿದ್ದಾರೆ.

‘ನಾನು 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ನಮ್ಮ ತಾಯಿ ಆನಂದಪರವಶರಾಗಿ, ‘ಸರ್ಕಾರದ ಕೆಲಸದಲ್ಲಿ ನಿನ್ನ ಪಾತ್ರ ಏನು ಎಂಬುದು ನನಗೆ ಗೊತ್ತಿಲ್ಲ. ಆದರೆ ನೀನು ಲಂಚ ಮಾತ್ರ ತೆಗೆದುಕೊಳ್ಳಬೇಡ’ ಎಂದಿದ್ದರು. ಅವರು ವಿಶಾಲ ಹೃದಯದವರು. ಬೇರೆಯವರ ಖುಷಿಯಲ್ಲಿ ತಮ್ಮ ಸಂತೋಷವನ್ನು ಕಂಡುಕೊಂಡವರು’ ಎಂದು ಬರೆದಿದ್ದಾರೆ.

ಶನಿವಾರ ನರೇಂದ್ರ ಮೋದಿ ಗುಜರಾತ್‌ನಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪ‍ಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT