ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಮದ್ಯ ಸೇವನೆ ವಿಡಿಯೊ ವೈರಲ್‌, ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು

Last Updated 21 ಜುಲೈ 2021, 6:58 IST
ಅಕ್ಷರ ಗಾತ್ರ

ಖಾರ್ಗೋನ್: ‘ಮಧ್ಯಪ್ರದೇಶದ ಖಾರ್ಗೋನ್‌ ಜಿಲ್ಲೆಯ ಗಸ್ತು ವಾಹನವೊಂದರ ಬಳಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಮದ್ಯ ಸೇವಿಸುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್‌ ಆಗಿದೆ. ಈ ವಿಡಿಯೊದಲ್ಲಿರುವ ನಾಲ್ವರನ್ನು ಅಮಾನತುಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಈ ಘಟನೆ ಸೋಮವಾರ ನಡೆದಿದ್ದು, ಈ ಬಳಿಕ ಅಧಿಕಾರಿಗಳನ್ನು ಅಮಾನತುಗೊಳಿಸುವ ಆದೇಶ ಹೊರಡಿಸಲಾಗಿದೆ. ‘ಇದು ಭದ್ರತಾ ಸಿಬ್ಬಂದಿಯ ಅವಿವೇಕವನ್ನು ತೋರಿಸುತ್ತಿದೆ. ಅಲ್ಲದೆ ಇದು ಪೊಲೀಸ್ ಪಡೆಯ ಹೆಸರನ್ನು ಹಾಳುಗೆಡಹುವ ಕೃತ್ಯವಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಈ ವಿಡಿಯೊದ ಆಧಾರದ ಮೇರೆಗೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಅಧಿಕಾರಿಗಳನ್ನು ಮಂಗಾಂವ್ ‍ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಜೈತ್ಪುರ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು ಎಂಬುದು ವಿಡಿಯೊದಿಂದ ತಿಳಿದುಬಂದಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೀರಜ್‌ ಚೌರಾಸಿಯಾ ಅವರು ಮಾಹಿತಿ ನೀಡಿದರು.

ಈ ಅಧಿಕಾರಿಗಳ ವಿರುದ್ಧ ಸರ್ಕಾರಿ ವಾಹನದ ದುರ್ಬಳಕೆಯ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT