ಭಾನುವಾರ, ಸೆಪ್ಟೆಂಬರ್ 19, 2021
24 °C

ಮಧ್ಯಪ್ರದೇಶ: ಸಚಿವ ತೋಮರ್‌ಗೆ ಸ್ಥಳೀಯರಿಂದ ಮುತ್ತಿಗೆ; ಡಿಸಿ, ಎಸ್‌ಪಿ ವರ್ಗಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಅವರಿಗೆ ಸ್ಥಳೀಯರು ಮುತ್ತಿಗೆ ಹಾಕಿದ ಘಟನೆ ನಡೆದ ಬೆನ್ನಲ್ಲೇ, ಶಿಯೋಪುರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಮಧ್ಯಪ್ರದೇಶ ಸರ್ಕಾರ ಭಾನುವಾರ ವರ್ಗಾವಣೆ ಮಾಡಿದೆ.

ಜಿಲ್ಲಾಧಿಕಾರಿ ರಾಕೇಶ್‌ ಶ್ರೀವಾಸ್ತವ ಅವರನ್ನು ಸಚಿವಾಲಯದ ಉಪಕಾರ್ಯದರ್ಶಿಯನ್ನಾಗಿ, ಎಸ್‌ಪಿ ಸಂಪತ್‌ ಉಪಾಧ್ಯಾಯ ಅವರನ್ನು ಪೊಲೀಸ್‌ ಇಲಾಖೆಯ ಎಐಜಿಯಾಗಿ ವರ್ಗಾವಣೆ ಮಾಡಲಾಗಿದೆ.

ಮಳೆ, ಪ್ರವಾಹದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಸಚಿವ ತೋಮರ್‌ ಅವರು ಶಿಯೋಪುರ ನಗರದ ಕರಾಟಿಯಾ ಬಜಾರ್‌ಗೆ ಶನಿವಾರ ಭೇಟಿ ನೀಡಿದ್ದರು. ಶಿಯೋಪುರ ನಗರ ತೋಮರ್‌ ಅವರು ಪ್ರತಿನಿಧಿಸುವ ಮೊರೆನಾ ಲೋಕಸಭಾ ಕ್ಷೇತ್ರದಲ್ಲಿದೆ.

‘ಸಚಿವರು ನಗರಕ್ಕೆ ತಡವಾಗಿ ಭೇಟಿ ನೀಡಿದ್ದಾರೆ’ ಎಂದು ಉದ್ರಿಕ್ತರ ಗುಂಪೊಂದು ಆಕ್ರೋಶ ವ್ಯಕ್ರಪಡಿಸಿ, ಮುತ್ತಿಗೆ ಹಾಕಿತ್ತು. ಕೆಲವರು ಸಚಿವರ ಬೆಂಗಾವಲು ವಾಹನಗಳ ಮೇಲೆ ಮಣ್ಣು ಹಾಗೂ ಕಟ್ಟಿಗೆಗಳ ತುಂಡುಗಳನ್ನು ಎಸೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು