ಭಾನುವಾರ, ಜನವರಿ 16, 2022
28 °C
MP sees second death of fully vaccinated person due to COVID 19 within week

2 ಡೋಸ್‌ ಲಸಿಕೆ ಪಡೆದೂ ಕೋವಿಡ್‌ನಿಂದ ಮರಣ: ಮಧ್ಯಪ್ರದೇಶದಲ್ಲಿ ವಾರದಲ್ಲಿ 2 ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್‌: ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಹೊರತಾಗಿಯೂ ಭೋಪಾಲ್‌ನಲ್ಲಿ 54 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್‌ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಸಂಪೂರ್ಣ ಲಸಿಕೆ ಪಡೆದಾಗ್ಯೂ ಭೋಪಾದಲ್ಲಿ ಕೋವಿಡ್‌ಗೆ ಒಂದೇ ವಾರದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಭೋಪಾಲ್‌ನ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ಮೃತಪಟ್ಟ ಮಹಿಳೆಯು ಕೋವಿಡ್‌ನ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದರು ಎಂದು ಭೋಪಾಲ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ ಪ್ರಭಾಕರ್ ತಿವಾರಿ ಪಿಟಿಐಗೆ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಎರಡು ಡೋಸ್‌ ಲಸಿಕೆ ಪಡೆದರೂ ಕೋವಿಡ್‌ನಿಂದ ವ್ಯಕ್ತಿ ಸಾವು

ಮೃತ ಮಹಿಳೆಯ ಕುಟುಂಬದ ಸದಸ್ಯರನ್ನು ಸುದ್ದಿ ಸಂಸ್ಥೆ ಪಿಟಿಐ ಸಂಪರ್ಕಿಸಿದೆ. ನವೆಂಬರ್ 15 ರಂದು ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದ್ದ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

 ‘ಅವರಿಗೆ 54 ವರ್ಷ ವಯಸ್ಸಾಗಿತ್ತು. ಗುರುವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಭೋಪಾಲ್‌ನ ಏಮ್ಸ್‌ನಲ್ಲಿ ನಿಧನರಾದರು. ಆಕೆಗೆ ಕೋವಿಡ್‌ ಬಿಟ್ಟು ಬೇರೆ ಯಾವುದೇ ಕಾಯಿಲೆಗಳು ಇರಲಿಲ್ಲ. ಆರೋಗ್ಯದಿಂದ ಇದ್ದರು. ಆದರೆ, ಸಣ್ಣ ಪ್ರಮಾಣದಲ್ಲಿ ರಕ್ತದೊತ್ತಡದ ಸಮಸ್ಯೆ ಇತ್ತು’ ಎಂದು ಕುಟುಂಬ ವರ್ಗ ಹೇಳಿದೆ.

ಮಹಿಳೆಯ ಪತಿ ಕೂಡ ಮಧ್ಯಪ್ರದೇಶದ ಸರ್ಕಾರಿ ವೈದ್ಯರಾಗಿದ್ದಾರೆ. ಪೂರ್ಣ ಲಸಿಕೆಗೆ ಪಡೆದರೂ ಮಧ್ಯಪ್ರದೇಶದಲ್ಲಿ ಒಂದು ವಾರದೊಳಗೆ ಸೋಂಕಿನಿಂದಾಗಿ ಸಾವಿಗೀಡಾದ ಎರಡನೇ ಪ್ರಕರಣ ಇದಾಗಿದೆ.

ಕಳೆದ ಭಾನುವಾರ ಇಂಧೋರ್‌ನಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು. ಅವರೂ ಎರಡು ಡೋಸ್‌ ಲಸಿಕೆ ಪಡೆದಿದ್ದರು.

ಮಧ್ಯಪ್ರದೇಶದಲ್ಲಿ ಈ ವರೆಗೆ 7,92,999 ಕೋವಿಡ್‌ ಪ್ರಕರಣಗಳು ಖಚಿತವಾಗಿದ್ದು, 10,525 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು