ಗುರುವಾರ , ಜನವರಿ 21, 2021
22 °C

ಕೇಂದ್ರ ಸರ್ಕಾರದಿಂದ ರೈತರ ಕಡೆಗಣನೆ; ‘ಪದ್ಮಭೂಷಣ’ ಹಿಂದಿರುಗಿಸಿದ ಸುಖದೇವ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿರುವ ಅಕಾಲಿದಳ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಖದೇವ್ ಸಿಂಗ್ ದಿಂಡ್ಸಾ ಅವರು ತಮಗೆ ದೊರೆತಿರುವ ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಖದೇವ್‌, ‘ರೈತರು ಕಳೆದ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರಾದರೂ ಅವರ ಮಾತನ್ನು ಆಲಿಸಲು ಕೇಂದ್ರ ಸರ್ಕಾರವು ಸಿದ್ಧವಿಲ್ಲ. ಹೀಗಾಗಿ ನಾನು ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ. ಯಾವಾಗ ಬಿಜೆಪಿ ಸರ್ಕಾರವು ನಮ್ಮ ಹಿರಿಯರನ್ನು ನಿರ್ಲಕ್ಷಿಸಿತೋ ಆಗ ಅವರು (ರೈತರು) ತಮ್ಮ ಹೋರಾಟವನ್ನು ದೆಹಲಿ ಗಡಿ ಪ್ರದೇಶಕ್ಕೆ ಸ್ಥಳಾಂತರಿಸಿದರು. ಈ ಪುರಸ್ಕಾರವು ನಿಷ್ಪ್ರಯೋಜಕವಾಗಿದೆ’ ಎಂದು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಅವರು ತಮ್ಮ ಪಕ್ಷವು ರೈತರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದು, ರೈತರ ಪ್ರತಿಭಟನೆ ವೇಳೆ ಪಕ್ಷದ ರಾಜಕೀಯದ ಬಗ್ಗೆ ಚರ್ಚಿಸದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 56 ಗಣ್ಯರಿಗೆ ಪದ್ಮ ಪ್ರಶಸ್ತಿ ಇಂದು

‘ನನ್ನ ಮಗ ಪರ್ಮಿಂದರ್‌ ಸಿಂಗ್‌ ದಿಂಡ್ಸಾ ಕೂಡ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಾನೂ ರೈತರ ಬೆಂಬಲಕ್ಕೆ ನಿಲ್ಲಲಿದ್ದೇನೆ. ಸರ್ಕಾರವು ಇಂತಹ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.

ಸುಖದೇವ್‌ ಅವರು 2019ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪದ್ಮಭೂಷಣ ಪುರಸ್ಕಾರ ಸ್ವೀಕರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು