ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಪದವೀಧರನಿಗೆ ₹ 47 ಲಕ್ಷದ ಮೈಕ್ರೋಸಾಫ್ಟ್‌ ಉದ್ಯೋಗ: ಯಶ್‌ಗೆ ಒಲಿದ ಯಶಸ್ಸು

ಮಧ್ಯಪ್ರದೇಶದ ಸಾಫ್ಟ್‌ವೇರ್ ಎಂಜಿನಿಯರ್ ಯಶ್‌ ಸೊನಾಕಿಯಾಗೆ ಒಲಿದ ಯಶಸ್ಸು
Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಇಂದೋರ್: ಮಧ್ಯಪ್ರದೇಶದ 25 ವರ್ಷ ವಯಸ್ಸಿನ ಅಂಧ ಸಾಫ್ಟ್‌ವೇರ್‌ ಎಂಜಿನಿಯರ್‌ ಯಶ್‌ ಸೊನಾಕಿಯಾ ಅವರು ಮೈಕ್ರೋಸಾಫ್ಟ್‌ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ವಾರ್ಷಿಕ ₹47 ಲಕ್ಷ ವೇತನ ನೀಡಲು ಸಂಸ್ಥೆ ಮುಂದಾಗಿದೆ.

ಯಶ್‌ ವ್ಯಾಸಂಗ ಮಾಡಿದ ಇಂದೋರ್‌ನ ಶ್ರೀ ಗೋವಿಂದ್‌ರಾಮ್‌ ಸೆಕ್ಸರಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಎಸ್‌ಜಿಎಸ್‌ಐಟಿಎಸ್‌) ಕಾಲೇಜಿನ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಯಶ್‌ ಈ ಕಾಲೇಜಿ ನಿಂದ2021ರಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ.

ಗ್ಲುಕೊಮಾದಿಂದ 8ನೇ ವಯಸ್ಸಿಗೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಯಶ್‌, ‘ಸ್ಕ್ರೀನ್‌ ರೀಡರ್‌’ ತಂತ್ರಾಂಶದ ಸಹಾಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.

‘ಮೈಕ್ರೋಸಾಫ್ಟ್‌ನ ಉದ್ಯೋಗ ಪ್ರಸ್ತಾವವನ್ನು ಸ್ವೀಕರಿಸಿದ್ದು, ಸದ್ಯದಲ್ಲೇ ಉದ್ಯೋಗಕ್ಕಾಗಿ ಸಂಸ್ಥೆಯ ಬೆಂಗಳೂರಿನ ಕಚೇರಿಗೆ ಹಾಜರಾಗಲಿದ್ದೇನೆ. ಸದ್ಯಕ್ಕೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ’ ಎಂದು ಯಶ್‌ ತಿಳಿಸಿದರು.

‘ಹುಟ್ಟಿನಿಂದಲೇ ಗ್ಲುಕೊಮಾ ಕಾಯಿಲೆ ಹೊಂದಿದ್ದ ನನ್ನ ಮಗ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗುವ ಆಕಾಂಕ್ಷೆ ಹೊಂದಿದ್ದ. ಆತ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಬಳಿಕವೂ ನಾವು ಅವನ ಆಸೆಗೆ ಬಂಬಲವಾಗಿ ನಿಂತಿದ್ದೆವು. ಅವನು5ನೇ ತರಗತಿಯವರೆಗೆ ವಿಶೇಷ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಬಳಿಕ ಸಾಮಾನ್ಯ ಶಾಲೆಗೆ ಸೇರಿಸಿದೆವು. ಆತನ ಸಹೋದರಿಯೊಬ್ಬಳು ಆತನಿಗೆ ಓದಿಗೆ ನೆರವಾದಳು. ವಿಶೇಷವಾಗಿಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆಕೆ ಸಹಕಾರ ನೀಡಿದಳು’ ಎಂದು ಇಂದೋರ್‌ನಲ್ಲಿ ಕ್ಯಾಂಟೀನ್‌ ನಡೆಸುತ್ತಿರುವ ಯಶ್‌ ತಂದೆಯಶ್‌ಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT