ಮಂಗಳವಾರ, ಮಾರ್ಚ್ 28, 2023
32 °C

ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಟೋದಿಂದ 1 ಲಕ್ಷ ಹಣವಿದ್ದ ಟವೆಲ್‌ ಹೊತ್ತೊಯ್ದ ಕೋತಿ!

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ: ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆಟೋದಿಂದ ಒಂದು ಲಕ್ಷ ಹಣವಿದ್ದ ಟವೆಲ್‌ ಅನ್ನು ಕೋತಿಯೊಂದು ಹೊತ್ತೊಯ್ದಿದೆ. ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ಸೆ.30ರಂದು ಈ ಘಟನೆ ನಡೆದಿದೆ. 

ಕತಂಗಿ ನಿವಾಸಿ ಮೊಹಮ್ಮದ್‌ ಅಲಿ ಹಣ ಕಳೆದುಕೊಂಡವರು. 

ಜಬಲ್ಪುರದ ಕಟವ್‌ ಘಾಟ್‌ನ ಕಿರಿದಾದ ರಸ್ತೆಯೊಂದರಲ್ಲಿ ಸೆ.30ರಂದು ಮಧ್ಯಾಹ್ನ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಲ್ಲಿ ಆಟೋ ಸಿಲುಕಿಕೊಂಡಿತ್ತು. ಆಟೋದಲ್ಲಿ ಹಣದ ವಾರಸುದಾರ ಅಲಿ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು ಎಂದು ಮಜೋಳಿ ಪೊಲೀಸ್ ಠಾಣೆಯ ಉಸ್ತುವಾರಿ ಸಚಿನ್ ಸಿಂಗ್ ಪಿಟಿಐಗೆ ತಿಳಿಸಿದರು.

‘ಟ್ರಾಫಿಕ್ ಜಾಮ್‌ಗೆ ಕಾರಣವೇನೆಂದು ತಿಳಿಯಲು ಮೂವರೂ ಆಟೋದಿಂದ ಹೊರಬಂದಾಗ, ಕೋತಿಯು ಟವೆಲ್‌ ಎತ್ತಿಕೊಂಡಿದೆ. ಅದರಲ್ಲಿ ₹1 ಲಕ್ಷ ಹಣವನ್ನು ಸುತ್ತಿಡಲಾಗಿತ್ತು. ಟವೆಲ್‌ ಅನ್ನು ಮರದ ಮೇಲಕ್ಕೆ ಹೊತ್ತೊಯ್ದ ಕೋತಿ ಅಲ್ಲಿ ಅದನ್ನು ಒದರಿದೆ. ಆಗ ನೋಟುಗಳೆಲ್ಲವೂ ಚಲ್ಲಾಪಿಲ್ಲಿಯಾಗಿವೆ. ಒಂದು ಲಕ್ಷ ಹಣದ ಪೈಕಿ ₹56,000 ಮಾತ್ರ ಅಲಿಗೆ ಸಿಕ್ಕಿದೆ. ಉಳಿದ ಹಣ ಕೈತಪ್ಪಿ ಹೋಗಿದೆ,‘ ಎಂದು ಪೊಲೀಸರು ವಿವರಿಸಿದರು.

ಉಳಿದ ಹಣವನ್ನು ಯಾರು ತೆಗೆದುಕೊಂಡರು ಎಂಬುದು ತಿಳಿದಿಲ್ಲ. ಘಟನೆಗೆ ಕಾರಣವಾಗಿರುವುದು ಕೋತಿಯಾದ್ದರಿಂದ  ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದೂ ಪೊಲೀಸರು ಹೇಳಿದರು.

ವಾಸ್ತವಾಂಶಗಳನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು