ಗುರುವಾರ , ಸೆಪ್ಟೆಂಬರ್ 29, 2022
26 °C

ತಿರುಪತಿ ತಿರುಮಲನ ಹುಂಡಿಗೆ ಮುಕೇಶ್‌ ಅಂಬಾನಿ ₹1.5 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುಪತಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌)ನ ಮುಖ್ಯಸ್ಥ ಮುಕೇಶ್‌ ಅಂಬಾನಿ ತಿರುಮಲ ಸಮೀಪದ ಪ್ರಾಚೀನ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹1.5 ಕೋಟಿ ಕಾಣಿಕೆ ನೀಡಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

ವೆಂಕಟೇಶ್ವರ ದೇವರ ಭಕ್ತರಾಗಿರುವ ಅಂಬಾನಿ, ಎನ್‌ಕೋರ್‌ ಹೆಲ್ತ್‌ಕೇರ್‌ ಸಿಇಒ ವಿರೇನ್‌ ಮರ್ಚೆಂಟ್‌ ಅವರ ಮಗಳು ರಾಧಿಕಾ ಮರ್ಚೆಂಟ್‌ ಹಾಗೂ ಆರ್‌ಐಎಲ್‌ನ ಕೆಲವು ಅಧಿಕಾರಿಗಳ ಜೊತೆ ಶುಕ್ರವಾರ ತಿರುಪತಿಗೆ ಭೇಟಿ ನೀಡಿದ್ದಾರೆ.

ಪೂಜೆಯ ನಂತರ ಅಂಬಾನಿ ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ. ವೆಂಕಟ ಧರ್ಮ ರೆಡ್ಡಿ ಅವರಿಗೆ ₹1.5 ಕೋಟಿ ಮೌಲ್ಯದ ಚೆಕ್‌ ನೀಡಿದ್ದಾರೆ.

ಅಂಬಾನಿ, ರಾಧಿಕಾ ಮರ್ಚೆಂಟ್‌ ಹಾಗೂ ಮತ್ತಿತರು ಪವಿತ್ರ ಸ್ನಾನ ಸೇರಿದಂತೆ ಮತ್ತಿತರ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಮರಳುವಾಗ ಅಂಬಾನಿ ಅವರು ದೇವಸ್ಥಾನದ ಆನೆಗಳಿಗೆ ಆಹಾರ ನೀಡಿದರು ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು