ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5G ಭಾರತದ ಪ್ರಥಮ ಆದ್ಯತೆಯಾಗಬೇಕು: ಮುಕೇಶ್ ಅಂಬಾನಿ

Last Updated 8 ಡಿಸೆಂಬರ್ 2021, 6:38 IST
ಅಕ್ಷರ ಗಾತ್ರ

ಮುಂಬೈ: ‘ಸಂಪೂರ್ಣವಾಗಿ 5ಜಿ ತಂತ್ರಜ್ಞಾನವನ್ನು ಸಾಕಾರಗೊಳಿಸುವುದು ಭಾರತದ ಪ್ರಥಮ ಆದ್ಯತೆಯಾಗಬೇಕು’ ಎಂದು ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

‘5ಜಿ ದೇಶದ ಪ್ರಥಮ ಆದ್ಯತೆಯಾಗಬೇಕು. 2ಜಿ, 4ಜಿ ಇಂದ ಎಲ್ಲರೂ ಶೀಘ್ರದಲ್ಲೇ 5ಜಿಗೆ ವಲಸೆ ಬರಬೇಕಾಗಿದೆ’ ಎಂದು ಅವರು ಡಿಜಿಟಲ್ ಕ್ರಾಂತಿಯ ಬಗ್ಗೆ ಮಾತನಾಡಿದ್ದಾರೆ.

‘ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳಗಿರುವ ಜನರನ್ನು 2ಜಿಗೆ ಸೀಮಿತಗೊಳಿಸುವುದು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳಿಂದ ಅವರನ್ನು ಹೊರಗಿಟ್ಟಂತಾಗುತ್ತದೆ’ ಎಂದು ಹೇಳಿದ್ದಾರೆ.

‘ಭಾರತದ ಡಿಜಿಟಲ್ ಕ್ರಾಂತಿ ಸಾಧಿಸಲು ಮೊಬೈಲ್ ಸಂಪರ್ಕ ನಿರ್ಣಾಯಕವಾಗಿದೆ ಎಂಬ ಅಂಶದಿಂದ ನಾವು ಹಿಂದೆ ಸರಿಯಬಾರದು. ಇದರಿಂದ ನಾವು ಹೊರಗುಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೇ ಫೈಬರ್ ನೆಟ್ ಸಂಪರ್ಕವನ್ನೂ ಭಾರತ ಒಂದು ಮಿಷನ್ ರೀತಿ ಪೂರ್ಣಗೊಳಿಸಬೇಕು’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮುಕೇಶ್ ಅಂಬಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT