ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಪ್ರವಾಹ: ತಪೋವನದ ಸುರಂಗದಲ್ಲಿ ಸಿಲುಕಿದ್ದ 30 ಮಂದಿ ರಕ್ಷಣೆ

ವಿವಿಧ ‘ವಿಪತ್ತು ನಿರ್ವಹಣಾ ಪಡೆಗಳ‘ ಜಂಟಿ ಕಾರ್ಯಾಚರಣೆ
Last Updated 8 ಫೆಬ್ರುವರಿ 2021, 8:22 IST
ಅಕ್ಷರ ಗಾತ್ರ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಹಿಮಪ್ರವಾದಿಂದಾಗಿ ತಪೋವನ ಸಮೀಪದ ಸುರಂಗದಲ್ಲಿ 34 ಮಂದಿ ಸಿಲುಕಿದ್ದಾರೆಂದು ಅಂದಾಜಿಸಲಾಗಿದ್ದು, ಅದರಲ್ಲಿ 30 ಮಂದಿಯನ್ನು ಪರಿಹಾರ ಕಾರ್ಯಾಚರಣೆ ಪಡೆಯುವವರು ರಕ್ಷಿಸಿದ್ದಾರೆ.

ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಮತ್ತು ಇತರೆ ರಾಜ್ಯದ ವಿಪತ್ತು ನಿರ್ವಹಣಾ ಪಡೆಗಳು ಇಡೀ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಕಲ್ಲುಬಂಡೆಗಳು ರಾಶಿಗಳು, ಕೆಸರಿನ ನಡುವೆ ಸಿಲುಕಿದ್ದವರನ್ನು ವಿಪತ್ತು ನಿರ್ವಹಣಾ ಪಡೆಯವರು ರಕ್ಷಿಸಿದ್ದಾರೆ.

‘ನಮ್ಮ ತಂಡಗಳು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಸಿಲುಕಿದ್ದ 30 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಗೆ ವಿಶೇಷ ಉಪಕರಣಗಳನ್ನು ಬಳಸಲಾಗಿತ್ತು‘ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ದೆಹಲಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು‌.

ಸುರಂಗದೊಳಗೆ ದೊಡ್ಡ ಪ್ರಮಾಣದಲ್ಲಿ ಕಲ್ಲು ಬಂಡೆಗಳು ರಾಶಿಯಾಗಿದ್ದವು. ಸುರಂಗದ ಒಳಗೆ 80 ಮೀಟರ್‌ವರೆಗೆ ತುಂಬಿಕೊಂಡಿದ್ದ ಕಲ್ಲುಬಂಡೆಗಳನ್ನು ತೆರವುಗೊಳಿಸಿದ್ದೇವೆ. ಈಗ ಸದ್ಯ ಕಾರ್ಯಾಚರಣೆಯಲ್ಲಿ ಐಟಿಬಿಪಿಯ 300 ಯೋಧರನ್ನು ನಿಯೋಜಿಸಲಾಗಿದೆ‘ ಎಂದು ಪಾಂಡೆ ತಿಳಿಸಿದರು. ಮತ್ತೊಬ್ಬ ಅಧಿಕಾರಿ ‘ಸುರಂಗದಲ್ಲಿ 34 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಿದರು.

ಐಟಿಪಿಬಿ ಪಡೆ ಹೆಚ್ಚುವರಿ ಪ್ರಧಾನ ನಿರ್ದೇಶಕ(ಪಶ್ಚಿಮ ಕಮಾಂಡ್‌)ಎಂ.ಎಸ್. ರಾವತ್ ಅವರು ಸೋಮವಾರ ಘಟನಾ ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT