ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಣಿಕ್‌ ಸೇತುವೆ ನೆಲಸಮ: 27 ತಾಸು ರೈಲು ಸಂಚಾರ ಬಂದ್‌

Last Updated 19 ನವೆಂಬರ್ 2022, 11:14 IST
ಅಕ್ಷರ ಗಾತ್ರ

ಮುಂಬೈ: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ರೈಲು ನಿಲ್ದಾಣ ಮತ್ತು ಮಸೀದಿ ಬಂದರ್‌ ರೈಲು ನಿಲ್ದಾಣ ನಡುವಿನ ಬ್ರಿಟಿಷರ ಕಾಲದ ಕಾರ್ಣಿಕ್ಸೇತುವೆಯ ನೆಲಸಮ ಕಾರ್ಯಾಚರಣೆ ನಡೆಯುವ ಕಾರಣ ಕೇಂದ್ರೀಯ ರೈಲ್ವೆಯು ಶನಿವಾರ ರಾತ್ರಿಯಿಂದ 27 ಗಂಟೆಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್‌ ಮಾಡಲಿದೆ.

ಶನಿವಾರ (ನ.19) ರಾತ್ರಿ 11ಗಂಟೆಯಿಂದ ನ.21ರ ಮಧ್ಯರಾತ್ರಿ 2 ಗಂಟೆವರೆಗೂ ಈ ಮಾರ್ಗ ಬಂದ್ ಆಗಿರಲಿದೆ. ಹೀಗಾಗಿ ನಗರ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೇಂದ್ರೀಯ ರೈಲ್ವೆ ತಿಳಿಸಿದೆ.

‘ಇದರಿಂದ 37 ಲಕ್ಷ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ.ಕಾರ್ಣಿಕ್‌ ಸೇತುವೆಯನ್ನು 1866–67ರಲ್ಲಿ ನಿರ್ಮಿಸಲಾಗಿದ್ದು, ಇದು ಅಸುರಕ್ಷಿತವಾಗಿದೆ ಎಂದು 2018ರಲ್ಲಿ ಐಐಟಿ ಬಾಂಬೆ ತಜ್ಞರು ಘೋಷಿಸಿದ್ದರು. 2014ರಿಂದಲೇ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT