ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ– ಗೋವಾ ಹೆದ್ದಾರಿ ಡಿಸೆಂಬರ್‌ಗೆ ಪೂರ್ಣ: ನಿತಿನ್‌ ಗಡ್ಕರಿ

Last Updated 30 ಮಾರ್ಚ್ 2023, 12:56 IST
ಅಕ್ಷರ ಗಾತ್ರ

ಠಾಣೆ: ‘ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮುಂಬೈ– ಗೋವಾ ಹೆದ್ದಾರಿಯನ್ನು ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲಾಗುವುದು’ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಗುರುವಾರ ತಿಳಿಸಿದರು.

ಪನವೇಲ್‌ನಲ್ಲಿ ಪಲಸ್ಪೆ–ಇಂದುಪುರ ಹೆದ್ದಾರಿ ಹಾಗೂ ಇತರ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಗುತ್ತಿಗೆದಾರರ ಸಮಸ್ಯೆ, ಭೂ ಸ್ವಾಧೀನ ಹಾಗೂ ಅನುಮತಿ ನೀಡಿಕೆಯಂತಹ ಕೆಲವು ಸಮಸ್ಯೆಗಳಿಂದ ಕೊಂಕಣ ಪ್ರದೇಶದ ಹಲವು ಅಭಿವೃದ್ಧಿ ಕಾಮಗಾರಿಗಳು ನಿಂತಿವೆ’ ಎಂದರು.

ಇದೇ ವೇಳೆ, ₹ 13,000 ಕೋಟಿ ಮೊತ್ತದಲ್ಲಿ ಮಾರ್ಬೆ- ಕಾರಂಜಾಡೆ ರಸ್ತೆಯನ್ನು ನಿರ್ಮಾಣ ಮಾಡುವುದಾಗಿ ಗಡ್ಕರಿ ಘೋಷಿಸಿದರು. ಇದು ಜವಾಹರಲಾಲ್‌ ನೆಹರೂ ಬಂದರಿನ ಮೂಲಕ ಹಾದುಹೋಗಲಿದ್ದು, ಮುಂಬೈ– ದೆಹಲಿ ನಡುವಿನ ಪ್ರಯಾಣ ಅವಧಿಯನ್ನು 12 ಗಂಟೆಯಷ್ಟು ತಗ್ಗಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT