ಬುಧವಾರ, ಜೂನ್ 16, 2021
27 °C

ಆಮ್ಲಜನಕ ಪೂರೈಕೆ: ಕೇಂದ್ರ, ಮಹಾರಾಷ್ಟ್ರಕ್ಕೆ ನಿರ್ದೇಶನ ಕೋರಿ ‘ಸುಪ್ರೀಂ’ಗೆ ಅರ್ಜಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತನ್ನಲ್ಲಿ ದಾಖಲಾಗಿರುವ ಕೋವಿಡ್‌–19 ರೋಗಿಗಳ ಜೀವ ಉಳಿಸುವುದಕ್ಕಾಗಿ ಅಗತ್ಯದಷ್ಟು ಆಮ್ಲಜನಕ ಪೂರೈಸುವಂತೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮುಂಬೈ ಮೂಲದ ಖಾಸಗಿ ಆಸ್ಪತ್ರೆಯೊಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

‘ಆಸ್ಪತ್ರೆಯಲ್ಲಿ 90 ಹಾಸಿಗೆಗಳಿದ್ದು, ಈ ಪೈಕಿ 13 ಹಾಸಿಗೆಗಳು ಹೈಟೆಕ್‌ ಐಸಿಯು ಸೌಲಭ್ಯಗಳನ್ನು ಹೊಂದಿವೆ. ಆದರೆ, ಖಾಸಗಿ ಕಂಪನಿಯು ಏ. 12ರಿಂದ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿದೆ. ಹೀಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕಾಯಿತು’ ಎಂದು ಆಸ್ಪತ್ರೆ ಅರ್ಜಿಯಲ್ಲಿ ವಿವರಿಸಿದೆ.

‘ನಿಗದಿತ ದರಕ್ಕಿಂತ 5 ಪಟ್ಟು ಹೆಚ್ಚು ಹಣ ನೀಡಲು ಆಸ್ಪತ್ರೆ ಸಿದ್ಧವಿದೆ. ಆದರೆ, ಕಂಪನಿಯು 10 ಪಟ್ಟು ಹೆಚ್ಚು ಹಣ ಕೇಳುತ್ತಿದೆ’ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು