ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕದ್ದಾಲಿಕೆ, ವರದಿ ಸೋರಿಕೆ: ಸಿಬಿಐ ನಿರ್ದೇಶಕ ಜೈಸ್ವಾಲ್‌ಗೆ ಸಮನ್ಸ್‌

Last Updated 9 ಅಕ್ಟೋಬರ್ 2021, 15:36 IST
ಅಕ್ಷರ ಗಾತ್ರ

ಮುಂಬೈ: ದೂರವಾಣಿ ಕದ್ದಾಲಿಕೆ ಮತ್ತು ಡೇಟಾ ಸೋರಿಕೆ ಪ್ರಕರಣದಲ್ಲಿ ಮುಂಬೈ ಪೋಲಿಸರ ಸೈಬರ್ ವಿಭಾಗವು ಸಿಬಿಐ ನಿರ್ದೇಶಕ ಹಾಗೂ ಮಹಾರಾಷ್ಟ್ರದ ಮಾಜಿ ಡಿಜಿಪಿ ಸುಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ಶನಿವಾರ ಸಮನ್ಸ್‌ ಜಾರಿ ಮಾಡಿದೆ.

ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಅಕ್ಟೋಬರ್ 14 ರಂದು ಹಾಜರಾಗುವಂತೆ ಜೈಸ್ವಾಲ್ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನದು ಪ್ರಕರಣ?

ಈ ಪ್ರಕರಣವು ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ರಾಜ್ಯದ ಗುಪ್ತಚರ ಇಲಾಖೆಯ ನೇತೃತ್ವ ವಹಿಸಿದ್ದಾಗ ಮಹಾರಾಷ್ಟ್ರದಲ್ಲಿ ನಡೆದ ಪೊಲೀಸ್ ವರ್ಗಾವಣೆ ಭ್ರಷ್ಟಾಚಾರದ ಆರೋಪದ ಕುರಿತು ಸಿದ್ಧಪಡಿಸಲಾದ ವರದಿಯ `ಸೋರಿಕೆ'ಗೆ ಸಂಬಂಧಿಸಿದೆ.

ಈ ಅವಧಿಯಲ್ಲಿ ಜೈಸ್ವಾಲ್ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ವಿಚಾರಣೆಯ ಸಮಯದಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್‌ಗಳನ್ನು ಕಾನೂನುಬಾಹಿರವಾಗಿ ಕದ್ದಾಲಿಕೆ ಮಾಡಲಾಯಿತು ಮತ್ತು ಉದ್ದೇಶಪೂರ್ವಕವಾಗಿ ವರದಿಯನ್ನು ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT