ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರದೇಶದಲ್ಲಿ ಹಿಂದೂ ದೇಗುಲಕ್ಕೆ ಭೂಮಿ ದಾನ ಮಾಡಿದ ಮುಸ್ಲಿಮ್ ವ್ಯಕ್ತಿ

Last Updated 12 ಅಕ್ಟೋಬರ್ 2022, 10:05 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಹಿಂದೂ ದೇಗುಲಕ್ಕೆ ಮುಸ್ಲಿಮ್ ವ್ಯಕ್ತಿ ಭೂಮಿ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಮೂಲಕ ಹಿಂದೂ-ಮುಸ್ಲಿಮ್ ಭಾವೈಕ್ಯತೆಯನ್ನು ಸಾರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ದೇಗುಲವನ್ನು ಸ್ಥಳಾಂತರ ಮಾಡುವುದು ಅನಿವಾರ್ಯವೆನಿಸಿದೆ. ದೇಗುಲ ಸ್ಥಳಾಂತರದ ಹಿನ್ನೆಲೆಯಲ್ಲಿ ಮುಸ್ಲಿಮ್ ವ್ಯಕ್ತಿ ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ದೆಹಲಿ-ಲಖನೌ ನಡುವೆ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 24 ವಿಸ್ತರಣೆಯ ಯೋಜನೆಗೆ ಕಚಿಯಾನಿ ಕೇರಾ ಗ್ರಾಮದಲ್ಲಿ ದೇಗುಲ ಇರುವುದರಿಂದ ಅಡಚಣೆ ಎದುರಾಗಿತ್ತು.

ಇದನ್ನು ಮನಗಂಡ ಬಾಬು ಅಲಿ, ದೇಗುಲದ ಹತ್ತಿರದಲ್ಲಿತಮ್ಮ ಅಧೀನತೆಯಲ್ಲಿರುವ 0.65 ಹೆಕ್ಟೇರ್ ಭೂಮಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ಇದರಿಂದಾಗಿ ದೇಗುಲವನ್ನು ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಮಸೇವಕ್ ದ್ವಿವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT