ಶುಕ್ರವಾರ, ಜನವರಿ 27, 2023
18 °C

ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಸಾವು: 15 ದಿನಗಳಲ್ಲಿ 3 ಪ್ರಕರಣ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಒಡಿಶಾದಲ್ಲಿ ಸಂಸದ ಸೇರಿ ರಷ್ಯಾದ ಇಬ್ಬರು ಪ್ರಜೆಗಳ ಅಸಹಜ ಸಾವಿನ ಬೆನ್ನಲ್ಲೆ ಮತ್ತೊಬ್ಬ ಪ್ರಜೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದಿಪ್ ಬಂದರಿನಲ್ಲಿ ಸರಕು ಹಡಗಿನಲ್ಲಿ ರಷ್ಯಾದ ಸೆರ್ಗಿ ಮಿಲ್ಯಕೋವ್ (51) ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  

ಸೆರ್ಗಿ ಮಿಲ್ಯಕೋವ್ ಸರಕು ಸಾಗಣೆ ಹಡಗಿನ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಅವರ ಸಾವಿಗೆ ಕಾರಣ ತಿಳಿಯಲಿದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.

ರಷ್ಯಾದ ಸಂಸದ ಪಾವೆಲ್‌ ಆ್ಯಂಥವ್‌ ಹಾಗೂ ವಕೀಲ ವಾಡ್ಲಿಮಿರ್‌ ಬಿದೆವೊ ಅವರು ರಾಯಗಡದ ಹೋಟೆಲೊಂದರಲ್ಲಿ ಈಚೆಗೆ ಅಸಹಜವಾಗಿ ಸಾವಿಗಿಡಾಗಿದ್ದರು. ಪಾವೆಲ್‌ ಅವರು ಕೂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಟೀಕಾಕಾರರಾಗಿದ್ದರು.

ಪಾವೆಲ್‌ ಆ್ಯಂಥವ್‌ ಹಾಗೂ ವಾಡ್ಲಿಮಿರ್‌ ಬಿದೆವೊ ಅವರ ಸಾವಿನ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸೆರ್ಗಿ ಮಿಲ್ಯಕೋವ್ ಸಾವಿನ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು