ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ರಾಜಕಾರಣದಲ್ಲಿ ಕ್ರಾಂತಿಕಾರಕ ಸ್ಥಿತ್ಯಂತರ: ಮುಕ್ತಾರ್ ಅಬ್ಬಾಸ್ ನಖ್ವಿ

Last Updated 7 ಡಿಸೆಂಬರ್ 2020, 12:13 IST
ಅಕ್ಷರ ಗಾತ್ರ

ರಾಂಪುರ್, ಉತ್ತರ ಪ್ರದೇಶ: ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕಾರಣದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ರಾಜಕಾರಣ ವಂಶಪಾರಂಪರಿಕ ಆಸ್ತಿ ಎಂದು ಭಾವಿಸಿದ್ದವರಿಗೆ ಈ ಬದಲಾವಣೆ ಭಾರಿ ಪೆಟ್ಟು ನೀಡಿದೆ’ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಅವರು, ಇಂದು ರಾಜಕೀಯ ಅಸ್ತಿತ್ವ ಕುಟುಂಬದ ಹಿರಿಮೆಯನ್ನು ಅವಲಂಬಿಸಿಲ್ಲ. ಪರಿಶ್ರಮವಷ್ಟೇ ರಾಜಕೀಯದಲ್ಲಿ ಅಸ್ತಿತ್ವ ದೊರಕಿಸಬಲ್ಲದು. ರಾಜಕೀಯ ಎಂದರೆ ಈಗ ಕೇವಲ ಕುಟುಂಬದ ಪ್ರಾಬಲ್ಯವಲ್ಲ, ಜನರಿಗೆ ಸೇವೆಯನ್ನು ಸಲ್ಲಿಸುವುದೇ ಆಗಿದೆ ಎಂದು ಹೇಳಿದರು.

ರಾಜಕಾರಣದಲ್ಲಿನ ಈ ಗಮನಾರ್ಹ ಬದಲಾವಣೆಯು ಮಹಾತ್ಮಗಾಂಧಿ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಪಂಡಿತ್ ದೀನದಯಾಳ್ ಉಪಾಧ್ಯಾಯ, ರಾಮಮನೋಹರ ಲೋಹಿಯಾ ಅವರ ಚಿಂತನೆಗಳನ್ನು ಸಾಕಾರಗೊಳಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಮೋದಿ ಸರ್ಕಾರವು ‘ಸುಧಾರಣೆ, ಸಾಧನೆ ಮತ್ತು ಸ್ಥಿತ್ಯಂತರ’ ಚಿಂತನೆಯನ್ನು ಆಧರಿಸಿದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಭಾಗಿಯಾಗಿಸಿದೆ. ಕೃಷಿಕರು, ರೈತರು, ಯುವಜನರು, ಬಡವರ ಪ್ರಗತಿಗೆ ಪೂರಕವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT