ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ರ‍್ಯಾಲಿ: ಪೌರತ್ವದ ಪ್ರಸ್ತಾಪವೇ ಮಾಡದ ಮೋದಿ

ಅಸ್ಸಾಂನಲ್ಲಿ ಮೋದಿ ಮೊದಲ ಚುನಾವಣಾ ರ‍್ಯಾಲಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ
Last Updated 18 ಮಾರ್ಚ್ 2021, 22:04 IST
ಅಕ್ಷರ ಗಾತ್ರ

ಗುವಾಹಟಿ: ಚುನಾವಣೆಯಲ್ಲಿ ಮತಗಳಿಸುವ ಒಂದೇ ಉದ್ದೇಶದಿಂದ ಅಸ್ಸಾಂ ರಾಜ್ಯವನ್ನು ಕಾಂಗ್ರೆಸ್ ವಿಭಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಜ್ಯದ ಕಟ್ಟಕಡೆಯ ಸಮುದಾಯದ ಅಭಿವೃದ್ಧಿಗೆ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಅಸ್ಸಾಂನ ಕರೀಮ್‌ಗಂಜ್‌ನಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮೋದಿಮಾತನಾಡಿದರು.ಆದರೆ, ಪ್ರಧಾನಿ ಅವರು ತಮ್ಮ ಭಾಷಣದ ಎಲ್ಲಿಯೂ ಪೌರತ್ವ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಸಿಎಎ ಅಥವಾ ಎನ್‌ಆರ್‌ಸಿ ಕುರಿತಂತೆ ದಕ್ಷಿಣ ಅಸ್ಸಾಂನ ಮತದಾರರು ಆತಂಕದಲ್ಲಿದ್ದಾರೆ. ಏಕೆಂದರೆ ಬಹುತೇಕ ಸಮಾನ ಸಂಖ್ಯೆಯ ಬಂಗಾಳಿ ಮಾತ ನಾಡುವ ಹಿಂದೂಗಳು ಮತ್ತು ಮುಸ್ಲಿಮರನ್ನು ಈ ಪ್ರದೇಶ ಹೊಂದಿದೆ. ಎನ್‌ಆರ್‌ಸಿಯಿಂದ ಬಂಗಾಳಿ ಮಾತನಾಡುವ ಮುಸ್ಲಿಮರು ಚಿಂತಿತರಾಗಿದ್ದಾರೆ. ಆದರೆ ಸಿಎಎ ಮೂಲಕ ಪೌರತ್ವದ ಭರವಸೆ ಮೋದಿಯವರು ನೀಡುತ್ತಾರೆ ಎಂಬ ವಿಶ್ವಾಸದಲ್ಲಿಬಂಗಾಳಿ ಮಾತನಾಡುವ ಹಿಂದೂಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT