ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಾತನ್ನು ನಾನೇಕೆ ಕೇಳಬೇಕು: ಪ್ರಧಾನಿ ಹೇಳಿಕೆಗೆ ರಾಹುಲ್‌ ತಿರುಗೇಟು

Last Updated 10 ಫೆಬ್ರುವರಿ 2022, 10:21 IST
ಅಕ್ಷರ ಗಾತ್ರ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಹುಲ್ ಗಾಂಧಿ ಮಾತು ಕೇಳುವುದಿಲ್ಲ ಮತ್ತು ಸದನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮೋದಿ ಮಾತನ್ನು ನಾನೇಕೆ ಕೇಳಬೇಕು’ ಎಂದು ಪ್ರಶ್ನಿಸಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ನಾನು ಮಾತನ್ನು ಕೇಳುವುದಿಲ್ಲವೆಂದು ಪ್ರಧಾನಿ ಹೇಳಿದ್ದಾರೆ. ಅವರು ಏನು ಹೇಳಿದರೆಂದು ನಿಮಗೆ ಅರ್ಥವಾಗಿದೆಯೇ? ಇದರರ್ಥ ಇಡಿ, ಸಿಬಿಐನ ಒತ್ತಡಗಳು ರಾಹುಲ್ ಮೇಲೆ ಕೆಲಸ ಮಾಡುವುದಿಲ್ಲ. ಅವರು ನಮ್ಮ ತನಿಖಾ ಸಂಸ್ಥೆಗಳ ಮಾತುಗಳನ್ನೂ ಕೇಳುವುದಿಲ್ಲ ಎಂಬುದಾಗಿದೆ’ ಎಂದು ಹೇಳಿದ್ದಾರೆ.

‘ಹೌದು, ಅವರು ಹೇಳಿದ್ದು ಸರಿಯಾಗಿದೆ. ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರ ಮಾತನ್ನು ಕೇಳುವುದಿಲ್ಲ. ಅವರು ಇಡಿ, ಸಿಬಿಐ ಮೂಲಕ ಎಲ್ಲರನ್ನೂ ಹೆದರಿಸಬಹುದು ಎಂದು ಭಾವಿಸುತ್ತಾರೆ. ನನಗೆ ಅವುಗಳ ಭಯವಿಲ್ಲ’ ಎಂದೂ ರಾಹುಲ್‌ ತಿಳಿಸಿದ್ದಾರೆ.

‘ಸಂಸತ್ತಿನಲ್ಲಿ ನಾನು ಈಗಾಗಲೇ ಹೇಳಿದ್ದೇನೆ. ಪ್ರಧಾನಿ ಮೋದಿ ಸೃಷ್ಟಿಸುತ್ತಿರುವ ಎರಡು ಭಾರತಗಳ ಬಗ್ಗೆ ಮಾತನಾಡಿದ್ದೇನೆ. ಒಂದು ಭಾರತವು ಕೈಗಾರಿಕೋದ್ಯಮಿಗಳದ್ದು, ಇನ್ನೊಂದು ಭಾರತ ಬಡವರು, ನಿರುದ್ಯೋಗಿಗಳದ್ದು’ ಎಂದು ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT