ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಮೊಲ್ನುಪಿರವಿರ್ ಮಾತ್ರೆ: 3ನೇ ಹಂತದ ಪ್ರಾಯೋಗಿಕ ಬಳಕೆಗೆ ಅರ್ಜಿ

ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಹೈದರಾಬಾದ್‌ನ ನ್ಯಾಟ್ಕೊ ಫಾರ್ಮಾ ಲಿ. ಕಂಪನಿ ಅರ್ಜಿ
Last Updated 26 ಏಪ್ರಿಲ್ 2021, 5:49 IST
ಅಕ್ಷರ ಗಾತ್ರ

ಹೈದರಾಬಾದ್‌: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ‘ಮೊಲ್ನುಪಿರವಿರ್‌ ಮಾತ್ರೆಗಳನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಅನುಮೋದನೆಗಾಗಿ ನ್ಯಾಟ್ಕೊ ಫಾರ್ಮಾ ಲಿಮಿಟೆಡ್ ಕಂಪನಿ ಕೇಂದ್ರೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ(ಸಿಡಿಎಸ್‌ಸಿಒ) ಅರ್ಜಿ ಸಲ್ಲಿಸಿದೆ.

ಅಮೆರಿಕದ ಪ್ರಮುಖ ಔಷಧ ಕಂಪನಿ ಮೆರ್ಕ್‌ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರವಿರ್‌ (ಎಂಕೆ -4482) ಮಾತ್ರೆಗಳನ್ನು ಎರಡು ಹಂತಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ರೋಗಿಗಳ ಮೇಲೆ ಬಳಸಲಾಗಿದೆ. ಈಗ ಮೂರನೇ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಲು ಕಂಪನಿ ಅರ್ಜಿ ಸಲ್ಲಿಸಿದೆ.

ಹೈದರಾಬಾದ್ ಮೂಲದ ಔಷಧ ತಯಾರಕರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ‘ ಪ್ರಾಯೋಗಿಕ ಹಂತದ ಪರೀಕ್ಷೆಗಳ ದತ್ತಾಂಶದ ಪ್ರಕಾರ ಮೊಲ್ನುಪಿರವಿರ್‌ ಮಾತ್ರೆಗಳು ಪ್ರಬಲವಾದ ಶೀತಜ್ವರ ನಿರೋಧಕ ಚಟುವಟಿಕೆಯನ್ನು(ಆಂಟಿ ಇನ್ಫ್ಲ್ಯೂಯೆಂಜಾ)ಹೊಂದಿದೆ ಹಾಗೂ ಸಾರ್ಸ್‌–ಕೋವ್‌–2 ವೈರಸ್‌ ಮರುಕಳಿಸುವುದನ್ನು ಪ್ರಬಲವಾಗಿ ಪ್ರತಿಬಂಧಿಸುವ ಗುಣವನ್ನೂ ಹೊಂದಿದೆ ಎಂದು ತಿಳಿದುಬಂದಿದೆ.

‘ಮೊಲ್ನುಪಿರವಿರ್‌ ನಿಂದ ಚಿಕಿತ್ಸೆ ಪಡೆದ ರೋಗಿಗಳು, ಚಿಕಿತ್ಸೆ ಪಡೆದ ಐದು ದಿನಗಳಲ್ಲೇ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕಾರ, ಮೊಲ್ನುಪಿರವಿರ್‌ ಮಾತ್ರೆಯೊಂದಿಗೆ ಕಡಿಮೆ ಅವಧಿಯಲ್ಲೂ ಆರೋಗ್ಯ ಉತ್ತಮಗೊಳ್ಳುವ ಸಾಧ್ಯತೆಗಳನ್ನು ಸೂಚಿಸುತ್ತದೆ‘ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT