ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1145 ಕೋಟಿ ವೆಚ್ಚದ 14 ಯೋಜನೆಗಳಿಗೆ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ಗೆ ಒಪ್ಪಿಗೆ

Last Updated 1 ಅಕ್ಟೋಬರ್ 2022, 13:23 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ನ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯು ₹1,145 ಕೋಟಿ ವೆಚ್ಚದ14 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಮಿಷನ್‌ನ ಮಹಾ ನಿರ್ದೇಶಕ ಜಿ.ಅಶೋಕ್‌ ಕುಮಾರ್‌ ನೇತೃತ್ವದಲ್ಲಿ ನಡೆದ 45ನೇ ಕಾರ್ಯಕಾರಿ ಸಮಿತಿಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಎನ್‌ಎಂಸಿಜಿ ಶನಿವಾರ ತಿಳಿಸಿದೆ.

14 ಯೋಜನೆಗಳಲ್ಲಿ ಒಳಚರಂಡಿ ನಿರ್ವಹಣೆ, ಕೈಗಾರಿಕೆಗಳಿಂದ ಬರುವ ಮಾಲಿನ್ಯದ ನಿಗ್ರಹ ಮತ್ತು ಜೀವವೈವಿಧ್ಯ ಸಂರಕ್ಷಣೆ ಮುಂತಾದವು ಸೇರಿವೆ.ಗಂಗಾ ತೀರದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಒಳಚರಂಡಿ ನಿರ್ವಹಣೆ ಸಂಬಂಧಿತ 8 ಯೋಜನೆಗಳಿಗೆ ಅನುಮತಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT