ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಯಾರಾಗಬೇಕು ಎಂಬುದನ್ನು ಪಂಜಾಬ್ ಜನರು ನಿರ್ಧರಿಸುತ್ತಾರೆ: ಸಿಧು

Last Updated 12 ಜನವರಿ 2022, 1:30 IST
ಅಕ್ಷರ ಗಾತ್ರ

ಚಂಡೀಗಡ: ‘ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಂಜಾಬ್‌ ಜನರೇ ನಿರ್ಧರಿಸಲಿದ್ದಾರೆ. ಹೈಕಮಾಂಡ್ ಅಲ್ಲ’ ಎಂದು ಕಾಂಗ್ರೆಸ್‌ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದಬನ್ನು ಹೈಕಮಾಂಡ್ ನಿರ್ಧರಿಸುತ್ತದೆಯೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಪಂಜಾಬ್‌ನ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ನಿಮಗೆ ಯಾರು ಹೇಳಿದ್ದು? ಅಂತಹ ತಪ್ಪು ಕಲ್ಪನೆಗಳನ್ನೆಲ್ಲಾ ಇಟ್ಟುಕೊಳ್ಳಬೇಡಿ. ಪಂಜಾಬ್‌ನ ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ. ಹಾಗೇ ಮುಖ್ಯಮಂತ್ರಿಯನ್ನೂ ಆಯ್ಕೆ ಮಾಡುತ್ತಾರೆ. ಆ ಅಧಿಕಾರ ಇರುವುದು ಜನರಿಗೆ ಮಾತ್ರ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆ, ಪ್ರಚಾರ ಸಮಿತಿ ರಚನೆ:ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪ್ರಚಾರ ಸಮಿತಿ ಮತ್ತು ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ. ‍ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಮಿತಿಗಳನ್ನು ರಚಿಸಲಾಗಿದೆ.

20 ಸದಸ್ಯರಿರುವ ಪ್ರಣಾಳಿಕೆ ಸಮಿತಿಯ ನೇತೃತ್ವವನ್ನು ಪಕ್ಷದ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರಿಗೆ ವಹಿಸಲಾಗಿದೆ. ಮನಪ್ರೀತ್ ಬಾದಲ್ ಅವರನ್ನು ಸಮಿತಿಯ ಉಪಾಧ್ಯಕ್ಷ ಮತ್ತು ಅಮರ್ ಸಿಂಗ್ ಅವರನ್ನು ಸಮನ್ವಯಕಾರನನ್ನಾಗಿ ನೇಮಕ ಮಾಡಲಾಗಿದೆ.ಉಪಮುಖ್ಯಮಂತ್ರಿ ಒ.ಪಿ ಸೋನಿ, ರಾಣಾ ಗುರ್ಜೀತ್, ಜೈವೀರ್ ಶೇರ್ಗಿಲ್‌ ಈ ಸಮಿತಿಯಲ್ಲಿ ಇದ್ದಾರೆ.

ಪ್ರಣಾಳಿಕೆ ಸಮಿತಿಗೆ 25 ಜನರನ್ನು ನೇಮಕ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕ ಸುನಿಲ್ ಜಾಖಡ್‌ಈ ಸಮಿತಿಯನ್ನು ಮುನ್ನಡೆಸಲಿದ್ದಾರೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಈ ಎರಡೂ ಸಮಿತಿಗಳ ಶಾಶ್ವತ ಆಹ್ವಾನಿತರಾಗಿ ಕೆಲಸ ಮಾಡಲಿದ್ದಾರೆ.

ಚುನಾವಣಾ ಕಣದಲ್ಲಿ

* ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜತೆಗೆ ಎನ್‌ಸಿಪಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಗೋವಾದಲ್ಲಿ ಕಾಂಗ್ರೆಸ್‌ ಅಥವಾ ಟಿಎಂಸಿ ಜತೆಗೆ ಮೈತ್ರಿಯ ಮಾತುಕತೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ

* ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಸ್ಪರ್ಧಿಸುವುದಿಲ್ಲ. ಐದು ರಾಜ್ಯಗಳಲ್ಲಿ ಪಕ್ಷವು ಕಣಕ್ಕೆ ಇಳಿಯಲಿದೆ. ಆ ಚುನಾವಣೆಗಳತ್ತ ಗಮನ ನೀಡುವ ಸಲುವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್‌.ಸಿ.ಮಿಶ್ರಾ ಹೇಳಿದ್ದಾರೆ

* ವಿದೇಶ ಪ್ರವಾಸದಿಂದ ವಾಪಸಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು, ಸೋಮವಾರ ತಡರಾತ್ರಿ ಗೋವಾ ಕಾಂಗ್ರೆಸ್‌ ನಾಯಕರ ಜತೆ ಸಭೆ ನಡೆಸಿದ್ದಾರೆ. ಚುನಾವಣೆಗೆ ರಾಜ್ಯದಲ್ಲಿ ಪಕ್ಷದ ಸಿದ್ಧತೆ ಮತ್ತು ತಂತ್ರಗಾರಿಕೆ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ

* ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್‌ಗೆ ಚುನಾವಣಾ ಆಯೋಗವು ಚಿಹ್ನೆಯನ್ನು ನೀಡಿದೆ. ಹಾಕಿಸ್ಟಿಕ್ ಮತ್ತು ಹಾಕಿ ಚೆಂಡಿನ ಚಿತ್ರವಿರುವ ಚಿಹ್ನೆಯೊಂದಿಗೆ ಪಕ್ಷವು ಚುನಾವಣೆ ಎದುರಿಸಲಿದೆ

ನುಡಿ–ಕಿಡಿ

ಚುನಾವಣೆಗೋಸ್ಕರ ಉತ್ತರ ಪ್ರದೇಶದಲ್ಲಿ ಕೋಮು ಧ್ರುವೀಕರಣ ಮಾಡುತ್ತಿರುವವರಿಗೆ ಜನರು ಮತದಾನದ ಮೂಲಕ ಸರಿಯಾದ ಪಾಠ ಕಲಿಸಲಿದ್ದಾರೆ

- ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ

ಎಎಪಿಯ ಉಚಿತ ವಿದ್ಯುತ್ ಕಾರ್ಯಕ್ರಮವನ್ನು ತುಚ್ಛವಾಗಿ ಟೀಕಿಸಲಾಗುತ್ತಿದೆ. ಆದರೆ ಇದು ಆರ್ಥಿಕತೆಗೆ ಮರುಚಾಲನೆ ನೀಡುವ ಬಹುದೊಡ್ಡ ಸಾಧನ

- ಅಕ್ಷಯ್ ಮರಾತೆ, ಎಎಪಿ ವಕ್ತಾರ

ಈ ಬಾರಿ ಎಲ್ಲಾ ಶೋಷಿತರು, ಶ್ರಮಿಕರು, ವಂಚಿತರು ಒಟ್ಟಾಗಲಿದ್ದಾರೆ. ಎಲ್ಲರನ್ನೂ ಅವಮಾನಿಸುವ ಬಿಜೆಪಿಯ ರಾಜನೀತಿಯ ಬದಲಿಗೆ, ಎಲ್ಲರಿಗೂ ಸಮಾನ ಗೌರವ ಸಲ್ಲಿಸುವ ರಾಜನೀತಿಗೆ ಜನರು ಮಣೆ ಹಾಕಲಿದ್ದಾರೆ. ಬಿಜೆಪಿಗೆ ಐತಿಹಾಸಿಕ ಸೋಲಾಗಲಿದೆ

- ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT