ಮಂಗಳವಾರ, ಜೂನ್ 22, 2021
29 °C

ವಿದೇಶಗಳ ನೆರವು ಒಪ್ಪುವ ‘ನಯಾ ಭಾರತ್‌‘ ಸೃಷ್ಟಿ: ಶಶಿ ತರೂರ್‌ ಟೀಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸರ್ಕಾರದ ನಿರಾಸಕ್ತಿ ಹಾಗೂ ವೈಫಲ್ಯಗಳಿಂದ ಸೃಷ್ಟಿಯಾದ ಅನುಕಂಪದಿಂದಾಗಿ  ವಿದೇಶಗಳ ನೆರವು ಒಪ್ಪಿಕೊಳ್ಳಬೇಕಾದ ‘ಹೊಸ ಭಾರತ‘ ಸೃಷ್ಟಿಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಟೀಕಿಸಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ವಿದೇಶಗಳ ನೆರವು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.

ದೇಶದಲ್ಲಿನ ಕೋವಿಡ್‌ ಪರಿಸ್ಥಿತಿ ಎದುರಿಸಲು ವಿವಿಧ ದೇಶಗಳು ಆಮ್ಲಜನಕ, ರೆಮ್‌ಡಿಸಿವಿರ್ ವಯಲ್ಸ್ ಮತ್ತು ಇತರೆ ಅಗತ್ಯ ಔಷಧಗಳ ನೆರವು ನೀಡುತ್ತಿವೆ. ‘ಅಮೆರಿಕದಿಂದ ಸಿಂಗಪುರ, ಜರ್ಮನಿಯಿಂದ ಥಾಯ್ಲೆಂಡ್‌ವರೆಗೆ ಜಗತ್ತು ಭಾರತಕ್ಕೆ ನೆರವಾಗಿ ನಿಂತಿದೆ’ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಭಾನುವಾರ ಟ್ವೀಟ್ ಮಾಡಿದ್ದರು.

ಸರ್ಕಾರವನ್ನು ಟೀಕಿಸಿ ತರೂರ್‌, ‘ಇದು, ನಯಾ ಭಾರತ್. ನಮ್ಮ ವೈಫಲ್ಯಗಳಿಂದ ಮೂಡಿದ ಅನುಕಂಪ ಮತ್ತು ಸರ್ಕಾರದ ನಿರಾಸಕ್ತಿ ಕಾರಣ ಇದನ್ನು ಒಪ್ಪಿಕೊಳ್ಳಬೇಕಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಆತ್ಮನಿರ್ಭರ್‌ ಭಾರತ್‌ ಚಿಂತನೆಗೆ ಪ್ರತಿಯಾಗಿ ‘ಪರಮಾತ್ಮನಿರ್ಭರ್‌ ಭಾರತ್‌‘ ಹ್ಯಾಷ್‌ಟ್ಯಾಗ್‌ ಅನ್ನು ವ್ಯಂಗ್ಯವಾಗಿ ಬಳಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಕಳೆದ ವಾರ ಭಾರತಕ್ಕೆ ವಿವಿಧ ದೇಶಗಳಿಂದ ಬರುತ್ತಿರುವ ಔಷಧ ಮತ್ತು ಪರಿಹಾರ ಸಾಮಗ್ರಿಗಳ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಪಡಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು