ಗುರುವಾರ , ಅಕ್ಟೋಬರ್ 22, 2020
23 °C

ಪ್ರಿಯಾಂಕಾ ವಿರುದ್ಧ ಪೊಲೀಸರ ಬಲಪ್ರಯೋಗ: ವಿವರಣೆ ಕೇಳಿದ ಎನ್‌ಸಿಡಬ್ಲ್ಯೂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಬಲಪ್ರಯೋಗ ಮಾಡಿದ್ದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಉತ್ತರ ಪ್ರದೇಶದ ಪೊಲೀಸರಿಗೆ ವಿವರಣೆ ಕೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಆಯೋಗವು, ‘ಇದೊಂದು ಸೂಕ್ಷ್ಮತೆ ಕಳೆದುಕೊಂಡ ವರ್ತನೆ. ಇಂಥ ಬೆಳವಣಿಗೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದೆ. ‘ಈ ಪ್ರಕರಣದ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಅಧ್ಯಕ್ಷೆ ಶರ್ಮಾರೇಖಾ ಅವರು ಉತ್ತರಪ್ರದೇಶದ ಪೊಲೀಸ್ ವರಿಷ್ಠರಿಂದ ವಿವರಣೆ ಬಯಸಿದ್ದಾರೆ’ ಎಂದು ತಿಳಿಸಿದೆ.

ಹಾಥರಸ್‌ ಸಂತ್ರಸ್ತೆ ಕುಟುಂಬ ಸದಸ್ಯರ ಭೇಟಿಗೆ ಪ್ರಿಯಾಂಕಾ ಗಾಂಧಿ ತೆರಳುವಾಗ ದೆಹಲಿ ಮತ್ತು ಉತ್ತರಪ್ರದೇಶ ಗಡಿಯಲ್ಲಿ ಪೊಲೀಸರ ಜೊತೆಗೆ ಜಟಾಪಟಿ ಆಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಈ ಹಂತದಲ್ಲಿ ಪೊಲೀಸರು ಪ್ರಿಯಾಂಕಾ ಅವರನ್ನು ಎಳೆದಾಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು