ಮಂಗಳವಾರ, ಮೇ 11, 2021
26 °C

ಲವ್‌ ಜಿಹಾದ್‌ ವಿರುದ್ಧ ಶಾಸನ: ಕೇರಳ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಶಬರಿಮಲೆಗೆ ಸಂಬಂಧಿಸಿ ಕಾಯ್ದೆ ಮತ್ತು ಲವ್‌ ಜಿಹಾದ್‌ ವಿರುದ್ಧ ಸ್ಪಷ್ಟವಾದ ಶಾಸನ, ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬರಿಗೆ ಉದ್ಯೋಗ, ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌...

ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳಿವು. ಕೇಂದ್ರದ ಸಚಿವ ಪ್ರಕಾಶ ಜಾವಡೇಕರ್ ಅವರು ಬುಧವಾರ ಎನ್‌ಡಿಎಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

‘ಬಿಜೆಪಿಯ ಪ್ರಣಾಳಿಕೆಯು ಪ್ರಗತಿಪರ, ಕ್ರಿಯಾತ್ಮಕ ಹಾಗೂ ಅಭಿವೃದ್ಧಿಗೆ ಪೂರಕವಾಗುವಂಥದ್ದು. ಕೇರಳವು ಇಂಥ ಪ್ರಣಾಳಿಕೆಗಾಗಿ ದೀರ್ಘಕಾಲದಿಂದ ಕಾಯುತ್ತಿತ್ತು’ ಎಂದು ಜಾವಡೇಕರ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಭಯೋತ್ಪಾದನೆ ಮತ್ತು ಹಸಿವುಮುಕ್ತ ಕೇರಳ ನಿರ್ಮಾಣ, ಶಬರಿಮಲೆಯ ಸಂಪ್ರದಾಯವನ್ನು ಕಾಪಾಡಲು ಶಾಸನ, ಭೂರಹಿತ ಎಸ್‌.ಸಿ, ಎಸ್‌.ಟಿ ಸಮುದಾಯದವರಿಗೆ ಐದು ಎಕರೆ ಕೃಷಿ ಭೂಮಿ, ಎಲ್ಲಾ ಬಿಪಿಎಲ್‌ ಕುಟುಂಬಗಳಿಗೆ ವರ್ಷದಲ್ಲಿ ಗರಿಷ್ಠ ಆರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಭರವಸೆಯನ್ನೂ ನೀಡಲಾಗಿದೆ.

‘ಕೇಂದ್ರದ ಯೋಜನೆಗಳನ್ನೇ ಸ್ವಲ್ಪ ಬದಲಿಸಿ ಜಾರಿ ಮಾಡುವ ಮೂಲಕ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಯೋಜನೆಗಳ ಶ್ರೇಯಸ್ಸು ತಮ್ಮದೇ ಎಂದು ಹೇಳಿಕೊಳ್ಳುತ್ತಿದ್ದರು’ ಎಂದೂ ಜಾವಡೇಕರ್‌ ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು