ಶನಿವಾರ, ಸೆಪ್ಟೆಂಬರ್ 18, 2021
22 °C

ಒಂದೇ ದಿನ ಮಾಸ್ಕ್ ಹಾಕದ 986 ಮಂದಿಗೆ ದಂಡ: ರಾಷ್ಟ್ರ ರಾಜಧಾನಿಯಲ್ಲಿ ಕಠಿಣ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ಒಂದೇ ದಿನ ಮಾಸ್ಕ್ ಧರಿಸಿದ 986 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರ ಅಧಿಕೃತ ಮಾಹಿತಿ ತಿಳಿಸಿದೆ.

ದೆಹಲಿ ಪೊಲೀಸರ ದತ್ತಾಂಶದ ಪ್ರಕಾರ, ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬುಧವಾರ ಒಟ್ಟು 1,077 ಚಲನ್‌ಗಳನ್ನು ನೀಡಲಾಗಿದ್ದು ಅದರಲ್ಲಿ 82 ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘನೆ, ಎಂಟು ರಸ್ತೆಯಲ್ಲಿ ಉಗುಳಿದ ಮತ್ತು ಒಂದು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮತ್ತು ಪಾನ್, ಗುಟ್ಕಾ ಮತ್ತು ತಂಬಾಕು ಜಗಿದ ಪ್ರಕರಣದಲ್ಲಿ ಚಲನ್ ನೀಡಲಾಗಿದೆ.

ಏಪ್ರಿಲ್ 19 ರಿಂದ ಆಗಸ್ಟ್ 29 ರವರೆಗೆ ಲಾಕ್‌ಡೌನ್ ಸಮಯದಲ್ಲಿ ಮಾಸ್ಕ್‌ ಧರಿಸದಿದ್ದಕ್ಕಾಗಿ 2,41,587 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಅದೇ ಅವಧಿಯಲ್ಲಿ, ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು 28,959 ಜನರಿಗೆ, ದೊಡ್ಡ ಸಾರ್ವಜನಿಕ ಕೂಟಗಳು ಅಥವಾ ಸಭೆಗಳನ್ನು ಆಯೋಜಿಸಿದ್ದಕ್ಕಾಗಿ 1,463, ರಸ್ತೆಯಲ್ಲಿ ಉಗಿದಿದ್ದಕ್ಕಾಗಿ 1,504 ಮತ್ತು ಮದ್ಯ, ಪಾನ್, ಗುಟ್ಕಾ ಮತ್ತು ತಂಬಾಕು ಸೇವಿಸಿದ್ದಕ್ಕಾಗಿ 1,599 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.

ಏಪ್ರಿಲ್ 19ರಿಂದ ಆಗಸ್ಟ್ 29ರವರೆಗೆ ಒಟ್ಟು 2,75,112 ಚಲನ್‌ಗಳನ್ನು ನೀಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು