ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಜಿ ಗುರಿ ಸಾಧನೆಗೆ ಭಾರತೀಯ ಮಾದರಿ ಸ್ಥಳೀಕರಣ ಅಗತ್ಯ: ನೀತಿ ಆಯೋಗ 

Last Updated 27 ಅಕ್ಟೋಬರ್ 2022, 12:48 IST
ಅಕ್ಷರ ಗಾತ್ರ

ಜೆಮ್‌ಶೆಡ್‌ಪುರ, ಜಾರ್ಖಂಡ: ವಿಶ್ವಸಂಸ್ಥೆ ನಿಗದಿಪಡಿಸಿದ ಸಾಮಾಜಿಕ ಅಭಿವೃದ್ಧಿ ಗುರಿ(ಎಸ್‌ಡಿಜಿ) 2030 ಸಾಧಿಸಲು ಭಾರತೀಯ ಮಾದರಿಯ ಸ್ಥಳೀಕರಣದ ಅಗತ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರ್ರಿ ಹೇಳಿದರು.

ಬಡತನ ನಿವಾರಣೆ, ಶೂನ್ಯ ಹಸಿವು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯಸಾಮಾಜಿಕ ಅಭಿವೃದ್ಧಿ ಗುರಿಗಳಲ್ಲಿ ಸೇರಿದೆ.

‘ಎಸ್‌ಡಿಜಿ ಸ್ಥಳೀಕರಣದ ಭಾರತೀಯ ಮಾದರಿಯು ನಾಲ್ಕು ಸ್ತಂಭಗಳನ್ನು ಹೊಂದಿದೆ.ಸಾಂಸ್ಥಿಕ ಮಾಲೀಕತ್ವ ರಚನೆ, ದೃಢವಾದ ವಿಮರ್ಶೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಸ್ಥಾಪಿಸುವುದು, ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ಸಮಾಜದ ವಿಧಾನ ಉತ್ತೇಜಿಸುವಲ್ಲಿ ಎಸ್‌ಡಿಜಿಗಳನ್ನು ಸಂಯೋಜಿಸುವ ಸಾಮರ್ಥ್ಯ ಅಭಿವೃದ್ಧಿಪಡಿಸುವುದಾಗಿದೆ’ ಎಂದು ಬೆರ್ರಿ ಹೇಳಿದರು.

ಜೆಮ್‌ಶೆಡ್‌ಪುರದ ಎಕ್ಸ್‌ಎಲ್‌ಆರ್‌ಐನಲ್ಲಿ ಡಾ. ವರ್ಗೀಸ್ ಕುರಿಯನ್ ಸ್ಮಾರಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ದೇಶದ ಭವಿಷ್ಯದ ನಾಯಕರು ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT