ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಿನ ಮತ್ತು ಹೊರಗಿನ ಶತ್ರುಗಳು ಯಾರೆಂದು ಕಂಡುಕೊಳ್ಳಬೇಕು: ಫಾರೂಕ್ ಅಬ್ದುಲ್ಲಾ

Last Updated 19 ಮಾರ್ಚ್ 2022, 15:59 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆಂತರಿಕ ಮತ್ತು ಬಾಹ್ಯ ಶತ್ರುಗಳು ಯಾರೆಂಬುದನ್ನು ಕಂಡುಕೊಳ್ಳಬೇಕು ಮತ್ತು ಜನರ ಏಕತೆ ಅಂತಹ ಶಕ್ತಿಗಳ 'ಕೆಟ್ಟ ಯೋಜನೆಗಳನ್ನು' ಕೆಲಸ ಮಾಡಲು ಬಿಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಶನಿವಾರ ಹೇಳಿದರು.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಹರಿನಾರಾ ಸಿಂಗ್‌ಪೋರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಆಡಳಿತದ ಸಹಜತೆ, ಶಾಂತಿ ಮತ್ತು ಅಭಿವೃದ್ಧಿಯ ನಿರೂಪಣೆಯು ಗೋಚರಿಸುತ್ತಿಲ್ಲ ಎಂದು ಹೇಳಿದರು.

'ಜನರು ತಮ್ಮ ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳಿಗಾಗಿ ಹಂಬಲಿಸುತ್ತಿದ್ದಾರೆ. ಅದನ್ನು 2019 ರಿಂದ ನಿರಂತರವಾಗಿ ಇಲ್ಲವಾಗಿಸಲಾಗಿದೆ' ಎಂದು ಅವರು ಆ ವರ್ಷದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಉಲ್ಲೇಖಿಸಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಜನರನ್ನು ಧಾರ್ಮಿಕ, ಪ್ರಾದೇಶಿಕ ಮತ್ತು ಪಂಥೀಯ ಆಧಾರದ ಮೇಲೆ ವಿಭಜಿಸಲು ಸಂಚು ರೂಪಿಸುವ 'ವಿಭಜಕ ಶಕ್ತಿಗಳ' ವಿರುದ್ಧ ಎಚ್ಚರಿಕೆಯಿಂದಿರಲು ಕರೆ ನೀಡಿದ ಅವರು, 'ಜಮ್ಮು ಮತ್ತು ಕಾಶ್ಮೀರದ ಜನರು ಎರಡು ಪ್ರಮುಖ ಯುದ್ಧಗಳನ್ನು ಎದುರಿಸುತ್ತಿದ್ದಾರೆ. ಒಂದು ರಾಷ್ಟ್ರೀಯವಾಗಿ ಮತ್ತು ಇನ್ನೊಂದು ಸ್ಥಳೀಯವಾಗಿ 'ವಿಭಜನೆ ಮಾಡುವ ಅಜೆಂಡಾ'. ಎಂದು ತಿಳಿಸಿದರು.

'ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಒಳಗಿನ ಮತ್ತು ಹೊರಗಿನ ಶತ್ರುಗಳು ಯಾರೆಂದು ಕಂಡುಕೊಳ್ಳುವ ಅಗತ್ಯವಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT