‘ತೀವ್ರ ಹಾಗೂ ಸಣ್ಣ ಕಾರ್ಯಾಚರಣೆಗಳಿಗೆ ಪಡೆಗಳು ಸಿದ್ಧವಾಗಬೇಕು’- ವಿ.ಆರ್.ಚೌಧರಿ

ನವದೆಹಲಿ: ಭಾರತೀಯ ವಾಯುಪಡೆಯು ಪ್ರಸ್ತುತದಲ್ಲಿನ ಸಂದರ್ಭಕ್ಕನುಗುಣವಾಗಿ, ತ್ವರಿತ ಸೂಚನಯೊಂದಿಗೆ ಕ್ಷಿಪ್ರ ಹಾಗೂ ಸಣ್ಣ ಕರ್ಯಾಚರಣೆ ನಡೆಸಲು ಸಿದ್ಧರಾಗಿರಬೇಕು ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಹೇಳಿದರು.
ವಿಚಾರಗೋಷ್ಠಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಪೂರ್ವ ಲಡಾಖ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳಿಂದ, ಲಡಾಖ್‌ನ ಹಲವಾರು ಕಡೆಗಳಲ್ಲಿ ನಿಯೋಜನೆ ಮಾಡಲಾಗಿದ್ದ ಎರಡೂ ಕಡೆಯ ಸೈನ್ಯದ ತುಕಡಿಗಳನ್ನು ತೆಗೆದು ಹಾಕಲಾಗಿದೆ. ಆದ್ದರಿಂದ ನಮ್ಮ ಪಡೆಗಳು ಎಲ್ಲ ಸಮಯದಲ್ಲೂ ಕಾರ್ಯಾಚರಣೆ ಹಾಗೂ ವ್ಯವಸ್ಥಾಪನಾ ತಂತ್ರದಿಂದ ಕಾರ್ಯ ನಿರ್ವಹಿಸಲು ತಯಾರಿರಬೇಕು’ ಎಂದು ಚೌದರಿ ತಿಳಿಸಿದರು.
ಇದನ್ನೂ ಓದಿ– ಮದುಮಗ ಯೋಧನನ್ನು ಹೆಲಿಕಾಪ್ಟರ್ ಮೂಲಕ ಕರೆತಂದ ಬಿಎಸ್ಎಫ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.