ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕೃಷಿ ಕಾನೂನು ಸುಧಾರಣೆಗೆ ಬಿಕೆಎಸ್‌ ಆಗ್ರಹ

Last Updated 19 ಆಗಸ್ಟ್ 2021, 15:20 IST
ಅಕ್ಷರ ಗಾತ್ರ

ನಾಗ್ಪುರ: ರೈತರಿಗೆ ತಾವು ಬೆಳೆದ ಬೆಳೆಗಳ ಉತ್ಪಾದನಾ ವೆಚ್ಚ ಭರಿಸಲು ಪೂರಕವಾಗಿ ‘ಲಾಭದಾಯಕ ಬೆಲೆ’ ನೀಡುವಂತೆ ಒತ್ತಾಯಿಸಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌) ಸೆಪ್ಟೆಂಬರ್‌ 8 ರಂದು ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಶಾಸನವನ್ನಾದರೂ ತರಬೇಕು ಅಥವಾ ಕಳೆದ ವರ್ಷ ಜಾರಿಗೆ ತಂದ ಕೃಷಿ ಮಾರುಕಟ್ಟೆ ಕಾನೂನುಗಳಲ್ಲಿ ಬದಲಾವಣೆಯನ್ನಾದರೂ ಮಾಡಬೇಕು ಎಂದು ರೈತ ಸಂಘಟನೆ ಆಗ್ರಹಿಸಿದೆ.

ಉತ್ಪಾದನಾ ವೆಚ್ಚ ಮತ್ತು ಲಾಭ ಸೇರಿದಾಗ ‘ಲಾಭದಾಯಕ ಬೆಲೆ’ ಎನಿಸಿಕೊಳ್ಳುತ್ತದೆ. ಇದನ್ನು ಪಡೆಯುವುದು ರೈತರ ಹಕ್ಕು. ಆದರೆ ರೈತರಿಗೆ ಇದು ಸಿಗುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಿಕೆಎಸ್‌ನ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT