ಸ್ವಾವಲಂಬಿ ಭಾರತದ ಗುರಿ ಹೊತ್ತ ನೂತನ ವಿಜ್ಞಾನ ನೀತಿ ಕರಡು

ನವದೆಹಲಿ: ಮುಂದಿನ ದಶಕದಲ್ಲಿ ವಿಶ್ವದ ಪ್ರಮುಖ ಮೂರು ವೈಜ್ಞಾನಿಕ ಸೂಪರ್‌ಪವರ್ ರಾಷ್ಟ್ರಗಳ ಪೈಕಿ ಭಾರತವನ್ನೂ ಒಂದಾಗಿಸುವ ಉದ್ದೇಶದಿಂದ ನೂತನ ವಿಜ್ಞಾನ ನೀತಿ 2020 ಕರಡನ್ನು(ಎಸ್‌ಟಿಐಪಿ) ಕೇಂದ್ರ ಸರ್ಕಾರ ರಚಿಸಿದ್ದು, ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲು ಉತ್ತೇಜನ, ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಕ್ಕೆ ಹೆಚ್ಚಿನ ಅನುದಾನದ ಗುರಿಯನ್ನು ಹಾಕಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ವೆಬ್‌ಸೈಟ್‌ನಲ್ಲಿ ಎಸ್‌ಟಿಐಪಿ 2020 ಕರಡು ಅಪ್‌ಲೋಡ್ ಮಾಡಲಾಗಿದ್ದು, ಜ.25ರೊಳಗಾಗಿ ಬದಲಾವಣೆಗಾಗಿ ಜನರಿಂದ ಸಲಹೆಯನ್ನು ಡಿಎಸ್‌ಟಿ ಆಹ್ವಾನಿಸಿದೆ. ‘ಫುಲ್ ಟೈಂ ಈಕ್ವಲೆಂಟ್(ಎಫ್‌ಟಿಇ) ಸಂಶೋಧಕರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿ ಮೇಲೆ ಒಟ್ಟು ಆಂತರಿಕ ವೆಚ್ಚದ (ಜಿಇಆರ್‌ಡಿ) ಹೆಚ್ಚಳ, ಪ್ರತಿ ಐದು ವರ್ಷಕ್ಕೊಮ್ಮೆ ಜಿಇಆರ್‌ಡಿಗೆ ಖಾಸಗಿ ವಲಯದ ಅನುದಾನದ ಗುರಿಯನ್ನು’ ಎಸ್‌ಟಿಐಪಿ 2020 ಹೊಂದಿದೆ.
‘ದೀರ್ಘಾವಧಿ ಹಾಗೂ ಮಧ್ಯಮ ಅವಧಿಯ ಯೋಜನೆಗಳಲ್ಲಿ ನೇರ ಬಂಡವಾಳ ಹೂಡಿಕೆಗಾಗಿ ಎಸ್‌ಟಿಐ ಅಭಿವೃದ್ಧಿ ಬ್ಯಾಂಕ್ ರಚನೆಯ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯದಲ್ಲಿ ಎಲ್ಲ ವರ್ಗದ ಜನರ ಪ್ರಾತಿನಿಧಿತ್ವ ಇರುವಂತೆ ಸಲಿಂಗಕಾಮಿ, ತೃತೀಯ ಲಿಂಗಿ ಸಮುದಾಯವನ್ನೂ ಲಿಂಗ ಸಮಾನತೆಯಡಿ ಸೇರ್ಪಡೆಗೊಳಿಸುವ ಬಗ್ಗೆಯೂ ಕರಡು ನೀತಿಯಲ್ಲಿ ಉಲ್ಲೇಖವಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.