ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಶೃಂಗೇರಿ ಮಠ ನೆರವಿನಿಂದ ನೂತನ ಶಾರದಾ ದೇವಸ್ಥಾನ ನಿರ್ಮಾಣ

Last Updated 6 ಫೆಬ್ರುವರಿ 2022, 14:38 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಉತ್ತರದಲ್ಲಿರುವ ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿರುವ ಶಂಕರಾಚಾರ್ಯ ಮಠವು ದೇವಿ ಶಾರದೆಯ ನೂತನ ದೇವಾಲಯ ನಿರ್ಮಿಸಲು ಮುಂದಾಗಿದೆ.

ಗ್ರಾಮದ ಬಳಿಯ ಕಿಶನ್‌ಗಂಗಾ ನದಿ ತೀರದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ.

ಮಠವು ನೀಡುವ ಪಂಚಲೋಹದಿಂದ ಮಾಡಿದ ದೇವಿ ಶಾರದೆಯ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಠದ ಸಿಇಒ ವಿ.ಆರ್‌.ಗೌರಿಶಂಕರ್ ತಿಳಿಸಿದ್ದಾರೆ.

6ನೇ ಶತಮಾನದಲ್ಲಿ ಸ್ಥಾಪಿಸಲಾದ ಶಾರದಾ ದೇವಸ್ಥಾನವನ್ನು ಸರ್ವಜ್ಞ ಪೀಠ ಎಂದೂ ಕರೆಯಲಾಗುತ್ತದೆ. ಸದ್ಯ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಈ ದೇವಸ್ಥಾನವನ್ನು ಹಾಳುಗೆಡವಲಾಗಿದೆ. ಇದೇ ಮಾದರಿಯಲ್ಲಿ ನೂತನ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT