ಭಾನುವಾರ, ಅಕ್ಟೋಬರ್ 25, 2020
28 °C

ಗೋವಾ: ಹೊಸ ಪ್ರವಾಸೋದ್ಯಮ ನೀತಿಗೆ ಸಂಪುಟ ಅಂಗೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಗೋವಾ ಸಚಿವ ಸಂಪುಟವು ಹೊಸ ಪ್ರವಾಸೋದ್ಯಮ ನೀತಿಗೆ ಅಂಗೀಕಾರ ನೀಡಿದ್ದು, ಈ ಮೂಲಕ ಗೋವಾವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾರ್ಪಡಿಸಲು ಮುಂದಾಗಿದೆ.

‘ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರ ನೇತೃತ್ವದಲ್ಲಿ ಬುಧವಾರ ಸಂಪುಟ ಸಭೆ ನಡೆದಿದೆ. ಈ ವೇಳೆ ಹೊಸ ಪ್ರವಾಸೋದ್ಯಮ ನೀತಿಗೆ ಅಂಗೀಕಾರ ನೀಡಲಾಗಿದೆ. ಈ ನೀತಿಯು ಪ್ರವಾಸೋದ್ಯಮಕ್ಕೆ ಸರಿಯಾದ ಮಾರ್ಗ ನೀಡಲಿದೆ’ ಎಂದು ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್‌ ಅಜಗಾಂವಕರ್‌ ಅವರು ತಿಳಿಸಿದರು.

‘ಗೋವಾಕ್ಕೆ ಉತ್ತಮ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತಾಗಬೇಕು. ನಾವು ಗೋವಾವನ್ನು ಡ್ರಗ್ಸ್‌ ಮುಕ್ತ ರಾಜ್ಯವಾಗಿ ಮಾರ್ಪಡಿಸಲು ಪ್ರಯತ್ನಿಸುತ್ತೇವೆ. ಈ ನೀತಿಯಡಿ ಪ್ರವಾಸಿಗರು ಹೊರ ಆವರಣದಲ್ಲಿ ಅಡುಗೆ ಮಾಡದಂತೆ ನಿರ್ಬಂಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಈ ಹೊಸ ನೀತಿಯಡಿ ಪ್ರವಾಸೋದ್ಯಮ ಮಂಡಳಿಯನ್ನು ರೂಪಿಸಲಾಗುತ್ತದೆ. ಈ ಮಂಡಳಿಯು ರಾಜ್ಯದ ಪ್ರವಾಸೋದ್ಯಮಕ್ಕಾಗಿ ಅಲ್ಪ ಮತ್ತು ದೀರ್ಘಕಾಲೀನ ಗುರಿಗಳನ್ನು ಸಾಧಿಸಲು ಭಾಗೀದಾರರನ್ನು ಸೇರಿಸುವ ಕಾರ್ಯ ಮಾಡಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು